ಹುಕ್ಕೇರಿ : ಹುಕ್ಕೇರಿ ತಾಲ್ಲೂಕಿನ ಕುಂದರಗಿ ಹಾಗೂ ಬೆಳಗಾವಿ ತಾಲ್ಲೂಕಿನ ಹುದಲಿ, ತುಮ್ಮರಗುದ್ದಿ, ಮುಚ್ಚಂಡಿ, ಅಂಕಲಗಿ, ಡುಮ್ಮುಉರಬನಟ್ಟಿ, ಕಲಕಾಂಬ, ಖನಗಾಂವ ಸೇರಿದಂತೆ ವಿವಿಧ ಗ್ರಾಮಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಇಂದು ತೆರಳಿ ಪ್ರವಾಹ ಹಾಗೂ ಮಳೆಯಿಂದಾದ ಹಾನಿಯನ್ನು ಪರಿಶೀಲಿಸಿದರು.
ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದ ರಾಹುಲ್ ಜಾರಕಿಹೊಳಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳುವ ಮೂಲಕ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಗ್ರಾಮದಲ್ಲಿ ಆಗಿರುವ ಹಾನಿಯನ್ನು ವೀಕ್ಷಣೆ ಮಾಡಿದ್ದೇನೆ. ಕೆಲವು ಮಾಹಿತಿಯನ್ನು ಗ್ರಾಮದ ಮುಖಂಡರಿಂದ ಪಡೆದುಕೊಂಡಿದ್ದೇನೆ. ಎಲ್ಲವನ್ನೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿ, ಸಂತ್ರಸ್ತರಿಗೆ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.
ಕುಂದರಗಿಯ ಅಡವಿಸಿದ್ಧೇಶ್ವರ ಮಠದ ಅಮರೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಮಳೆಯಿಂದಾಗಿ ಮಠದ ಆವರಣದಲ್ಲಿ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿ, ಸ್ವಾಮೀಜಿಗಳಿಂದ ಮಾಹಿತಿ ಪಡೆದರು.
ಅರವಿಂದ ಕಾರಚಿ, ಅಲ್ಲಾಖಾನ ಅಳ್ಳಿಕಟ್ಟಿ, ಸಿಂಧೂರ ಮಾಸ್ತಮರ್ಡಿ, ಮಲ್ಲಿಕ್ ದೇಸಾಯಿ, ರಶೀದ್ ಅರಳಿಕಟ್ಟಿ, ಮಲ್ಲಿಕ್ ಮಾದರ ಸೇರಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.