ಗೋಕಾಕ: ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ ಎಂದು ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು
ಶನಿವಾರದಂದು ನಗರದ ಜ್ಞಾನ ಮಂದಿರದಲ್ಲಿ ಇಲ್ಲಿನ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾಗಿದ್ದ ದಿವಂಗತ ಬಿ.ಆರ್.ಅರಶಿನಗೋಡಿ ಹಾಗೂ ದಿವಂಗತ ಬಸವಣ್ಣೆಪ್ಪಾ ಹೋಸಮನಿ ಇವರ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು .
ಗೋಕಾಕ ನಾಡು ಮುಂಚೆಯಿಂದಲು ಕಲಾವಿದರಿಗೆ ವರದಾನವಾಗಿದೆ ಕಳೆದ 20 ವರ್ಷಗಳಿಂದ ಇಲ್ಲಿನ ಸಾಹಿತಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿಲಾಗಿದ್ದು, ಮುಂದೆಯೂ ಸಹ ಗೋಕಾಕ ನಾಡಿನ ಕಲಾವಿದರನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವದು. ಜಾನಪದ , ರಂಗ ಕಲೆಗಳು ನಶಿಸಿಹೊಗುತ್ತಿವೆ. ಅದನ್ನು ಉಳಿಸಿ ಬೆಳೆಸಬೇಕಾಗಿದೆ.
ಇಲ್ಲಿನ ಸಾಹಿತಿ, ಕಲಾವಿದರು ಕಲೆಯ ಸೇವೆಯನ್ನು ಮಾಡುತಾ ಗೋಕಾವಿ ನಾಡಿನ ಕೀರ್ತಿಯನ್ನು ಉತುಂಗಕ್ಕೆ ಏರಿಸಿದ್ದಾರೆ ಅದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು,ಅಧ್ಯಕ್ಷೆತೆಯನ್ನು ಅಶೋಕ ಪೂಜಾರಿ ವಹಿಸಿದ್ದರು
ವೇದಿಕೆಯ ಮೇಲೆ ಆಶಾ ಕಿರಣ ಕಲಾ ಟ್ರಸ್ಟನ ಅಧ್ಯಕ್ಷೆ ಶ್ರೀಮತಿ ಮಾಲತಿಶ್ರೀ ಮೈಸೂರು , ಕಸಾಪ ತಾಲೂಕು ಅಧ್ಯಕ್ಷ ಮಹಾಂತೇಶ ತಾಂವಶಿ, ಸಾಹಿತಿ ಪ್ರೋ ಚಂದ್ರಶೇಖರ್ ಅಕ್ಕಿ , ಮಾಜಿ ನಗರಾಧ್ಯಕ್ಷ ಸಿದ್ದಲಿಂಗಪ್ಪ ದಳವಾಯಿ , ಶಾಮಾನಂದ ಪೂಜೇರಿ , ಶ್ರೀಮತಿ ರಜನಿ ಜಿರಗ್ಯಾಳ , ಶಂಕರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು