ಯಮಕನಮರಡಿ: ಯಮಕನಮರಡಿಯಲ್ಲಿ ಆರ್ ಆಯ್ ಡಿಎಪ್ ಯೋಜನೆ ಅಡಿಯಲ್ಲಿ 43 ಲಕ್ಷ ರೂ. ವೆಚ್ಚದಲ್ಲಿ ಪಶು ಕಟ್ಟಡ ನಿರ್ಮಾಣ ಕಾಮಗಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಗುರುವಾರ ಚಾಲನೆ ನೀಡಿದರು.
ಈ ವೇಳೆ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಜಾನುವಾರುಗಳ ಪಾಲನೆ- ಪೋಷಣೆಗಾಗಿ ಯಮಕನಮರಡಿಯಲ್ಲಿ ಪಶು ಕಚೇರಿ ಅಗತ್ಯವಿದೆ. ಹೀಗಾಗಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಓಂಕಾರ ತುಬಚಿ, ಕಿರಣ್ ರಜಪೂತ್ ಹಾಗೂ ಸದಸ್ಯರು ಇತರರು ಇದ್ದರು.