ಮೂಡಲಗಿ: ಪಟ್ಟಣದ ಗೋಕಾಕ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ‘ಪುಣ್ಯಕೋಟಿ ಸ್ಪೋರ್ಟ್ಸ್ ಮಳಿಗೆ’ಯನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನೂತನ ಕ್ರೀಡಾ ಸಾಮಗ್ರಿಗಳ ಮಳಿಗೆಗೆ ಶುಭ ಹಾರೈಸಿದರು. ಮಳಿಗೆಯಲ್ಲಿನ ಸಾಮಗ್ರಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಳಿಗೆಯ ಮಾಲೀಕರಾದ ಚಂದ್ರೇಶ ಶೆಟ್ಟಿ ಹಾಗೂ ಬಸವರಾಜ ಹೊಸಮನಿ ಅವರು ರಾಹುಲ್ ಅವರನ್ನು ಸನ್ಮಾನಿಸಿದರು.
ಮಳಿಗೆಯ ಮಾಲೀಕರ ಸ್ನೇಹಿತರು, ಬಂಧುಗಳು ಸೇರಿ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.
CKNEWSKANNADA / BRASTACHARDARSHAN CK NEWS KANNADA