Breaking News

3ನೇ ಅಲೆ ಹರಡದಂತೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ ಜಾರಕಿಹೊಳಿ


ಬೆಂಗಳೂರು: ಕೋವಿಡ್ 1, 2 ಅಲೆಬಂದು ಹೋಗಿದೆ. 3ನೇ ಅಲೆ ಬರಲಿದೆ. ಮೊದಲೆರಡು ಅಲೆಗಳಲ್ಲಿ ಬೇರೆಬೇರೆ ಸಮಸ್ಯೆಗಳು ಇದ್ದವು. ಈಗ ಬೇರೆ ಸಮಸ್ಯೆಗಳು ಎದುರಾಗಬಹುದು. ಸರ್ಕಾರ ಇವುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಮತ್ತು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ ಹೇಳಿದರು.

ಮಾನವ ಬಂಧುತ್ವ ವೇದಿಕೆಯಿಂದ ಇಂದು (ಜೂ.20) ರಂದು ನಡೆದ 10 ದಿನಗಳ ಆರೋಗ್ಯ ಬಂಧುತ್ವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ 140 ಕೋಟಿ ಜನರಲ್ಲಿ ಏಕಕಾಲಕ್ಕೆ ಕೊರೊನಾ ತಗುಲಿದ್ದು ಕೇವಲ 5 ಲಕ್ಷ ಜನಕ್ಕೆ. ಅವರಿಗೆ ಬೆಡ್, ಚಿಕಿತ್ಸೆ ಕೊಡಲು ಸಾಧ್ಯವಾಗಲಿಲ್ಲ. ಮೂಲಭೂತ ಸೌಕರ್ಯವಿದ್ದರೂ 5 ಲಕ್ಷ ಜನರಿಗೆ ಕೇರ್ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದರು.

ಮುಂಜಾಗೃತೆ ಅಗತ್ಯ:

ಕೊರೊನಾ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಪಡೆದರೆ ಕೆಲವರು 500 ರೂ.ಗೆ ಗುಣವಾಗಿದ್ದಾರೆ. ಒಬ್ಬರು 40 ಲಕ್ಷ ರೂ. ಖರ್ಚು ಮಾಡಿದರೂ ಬದುಕಲಿಲ್ಲ. ಮುಂಜಾಗ್ರತೆ ಕೈಗೊಂಡರೆ ಮನೆಯಲ್ಲೇ ನೀವು ಗುಣವಾಗಬಹುದು. ಕೋವಿಡ್ ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ಕಲಿಸಿದೆ. ಲಾಕ್ ಡೌನ್ ಅನ್ನು ರಾತ್ರಿ 8 ಗಂಟೆಗೆ ಘೋಷಣೆ ಮಾಡಿದರು. ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೊಳಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುವಾಗ ಮುಂದಾಲೋಚನೆ ಮಾಡಬೇಕು. ಮುಂದಿನ ದಿನಗಳಲ್ಲಿ ಆ ರೀತಿ ಆಗಬಾರದು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿಗಳಿಗೆ ಪತ್ರ:

ಹೊಸದಾಗಿ 50 ತಾಲೂಕುಗಳಲ್ಲಿ 100 ಆಸ್ಪತ್ರೆಗಳನ್ನು ನಿರ್ಮಿಸಿ, ರಾಜ್ಯದ ಎಲ್ಲ‌ ಆಸ್ಪತ್ರೆಗಳಿಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದರು. ಜೊತೆಗೆ, ಪ್ರವಾಸಿಗರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಕೊರೊನಾ 10 ವರ್ಷದವರೆಗೂ ಇರಬಹುದು. ರಾಜ್ಯದಲ್ಲಿ 30,000 ಪರೀಕ್ಷೆಗಳನ್ನು ಪ್ರತಿದಿನ ನಡೆಸಲಾಗುತ್ತಿದೆ. ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಸಿಎಂಗೆ ಪತ್ರವನ್ನೂ ಬರೆದಿದ್ದೇನೆ ಎಂದು ತಿಳಿಸಿದರು.

ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ರಾಜ್ಯಕ್ಕೆ 900 ಟನ್ ಆಕ್ಸಿಜನ್ ಸಿಕ್ಕಿದೆ. ಇಲ್ಲದಿದ್ದರೇ ಜಿಂದಾಲ್ ನಲ್ಲಿ ಉತ್ಪಾದನೆಯಾದ ಆಕ್ಸಿಜನ್ ಅನ್ನು ಕೂಡ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಕೋರ್ಟ್ ಮಧ್ಯಪ್ರವೇಶದಿಂದ ಸಿಕ್ಕಿದೆ. ಕೋರ್ಟ್ ಉತ್ತಮ ಕೆಲಸ ಮಾಡಿದೆ. ಮುಂದೆ ಕೂಡ ಇಂತಹ ಸಮಯದಲ್ಲಿ ಮಾಡಲಿದೆ ಎಂದರು.

ಎಂಬಿವಿ ವೆಬಿನಾರ್ ಗೆ ಮೆಚ್ಚುಗೆ:

ತಜ್ಞರು, ವೈದ್ಯರು, ಸ್ವಾಮೀಜಿಗಳು ಆರೋಗ್ಯ ಬಂಧುತ್ವ ವೆಬಿನಾರ್ ನಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ. ಕಾರ್ಯಕ್ರಮದಲ್ಲಿ ತಿಳಿವಳಿಕೆ ನೀಡಿದ ಎಲ್ಲರಿಗೂ ಧನ್ಯವಾದಗಳು. ಮಾನವ ಬಂಧುತ್ವ ವೇದಿಕೆ ಬಹಳ ಜನಕ್ಕೆ ಇದು ವಿಶಿಷ್ಟ ಕಾರ್ಯಕ್ರಮ ಎನಿಸಬಹುದು ಎಂದು ಸತೀಶ ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆಯೆಂದರೆ ಮೂಢನಂಬಿಕೆ ವಿರೋಧಿ, ಧರ್ಮ ವಿರೋಧಿ ಎಂಬ ತಪ್ಪು ತಿಳಿವಳಿಕೆ ಇದೆ. ಮೂಢನಂಬಿಕೆ ವಿರುದ್ಧ ಹೋರಾಡುವುದು ನಮ್ಮ ಕಾರ್ಯಕ್ರಮದ ಒಂದು ಭಾಗ. ನಾವು ಕೆ.ಎ.ಎಸ್., ತರಬೇತಿ, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ತರಬೇತಿ, ಉದ್ಯಮಗಳ ಸ್ಥಾಪನೆಗೆ ಅಗತ್ಯ ತರಬೇತಿಯಂತಹ ಕೆಲಸಗಳನ್ನು ಕೂಡ ಮಾಡುತ್ತಿದ್ದೇವೆ ಎಂದರು.

ವೇದಿಕೆಯಿಂದ ವಿಭಿನ್ನ ಕಾರ್ಯ:

ಮಾನವ ಬಂಧುತ್ವ ವೇದಿಕೆ ಮುಂದಿನ ದಿನಗಳಲ್ಲಿ ಕೃಷಿ ಮೊದಲಾದ ಇನ್ನಿತರ ವಿಷಯದ ಕುರಿತು ಕೆಲಸ ಮಾಡಲಿ. ಪ್ರವಾಹ, ಕೋವಿಡ್ ಮೊದಲಾದ ವಿಷಯಗಳಲ್ಲಿ ಕೂಡ ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತಿದೆ. ಬೇರೆ ರಾಜ್ಯದ ವಲಸಿಗರನ್ನು 14 ದಿನ ವಸತಿ ಉಳಿಸಿದ್ದೇವೆ. ತರಕಾರಿಗಳನ್ನು ಕೊಂಡು ಜನರಿಗೆ ವಿತರಿಸಿದ್ದೇವೆ. ಆಕ್ಸಿಜನ್ ಸರಬರಾಜು ಕೆಲಸವನ್ನು ಕೂಡ ಮಾಡಿದ್ದೇವೆ ಎಂದು ತಿಳಿಸಿದರು.

ಜನರು ಜಾಗೃತಿಯಿಂದ, ಜವಾಬ್ದಾರಿಯಿಂದ ಇರಬೇಕು. ಸರ್ಕಾರ ಕೂಡ ಕೆಲಸ ಮಾಡಬೇಕು. ಮಾನವ ಬಂಧುತ್ವ ವೇದಿಕೆ ಇಂತಹ ಒಳ್ಳೆಯ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಅಗತ್ಯವಾದ ಕೆಲಸಗಳನ್ನು ಮುಂದುವರೆಸೋಣ. ಜನರಿಗೆ ಅನುಕೂಲವಾಗುವಂತೆ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮುಂದೆ ಕೂಡ ಜನಪರ ಕೆಲಸ ಮುಂದುವರೆಸುತ್ತೇನೆ ಎಂದು ಸತೀಶ ಜಾರಕಿಹೊಳಿ ಹೇಳಿದರು. 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ