ಗೋಕಾಕ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಕ್ರಿಯವಾಗಿದ್ದು, ಶಿಕ್ಷಕರ ರಕ್ಷಣೆಗಾಗಿ ಜಾಗೃತಿ ಅಭಿಯಾನ ಅಡಿಯ ಮೊದಲ ಹಂತದಲ್ಲಿ ತಾಲೂಕಿನಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲಾ 410 ಶಿಕ್ಷಕರಿಗಾಗಿ ಗುಣಮುಟ್ಟದ ಮಾಸ್ಕ್ ಗಳನ್ನು ಯುವ ಮುಖಂಡ ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ಕ್ಷೇತ್ರದ ಸಮನ್ವಯ ಅಧಿಕಾರಿ ಎಂ ಬಿ.ಪಾಟೀಲ್ ಅವರಿಗೆ ಬುಧವಾರ ಹಸ್ತಾಂತರಿಸಲಾಯಿತು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಬಸವರಾಜ ಸಾಹುಕಾರ ಎನ್ ಕುಮಸಗಿ ಇವರು “ಗೋಕಾಕ ಶೈಕ್ಷಣಿಕ ಸಿಹಿಯನ್ನು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಂಚುವ ಬಂಧುಗಳಿಗೆ” ಸೇವಾಮನೋಭಾವದಿಂದ ಗುಣಮಟ್ಟದ ಮಾಸ್ಕ್ ಗಳನ್ನು ಮೊದಲ ಹಂತದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಪದವಿ ಪೂರ್ವ ಮಹಾವಿದ್ಯಾಲಯ , ಪ್ರೌಢ ಶಾಲೆಗಳು ಹಾಗೂ ವಸತಿ ನಿಲಯದ ಎಲ್ಲಾ ಸಂಸ್ಥೆಗಳ ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಮಾಸ್ಕ್ ಗಳನ್ನು ನೀಡಲಾಗುತ್ತಿದೆ.
ಇನ್ನೂ ಎರಡನೇಯ ಹಂತದಲ್ಲಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಸಮಾಜ ಕಣ್ಣು ಅವರ ರಕ್ಷಣೆ ನಮ್ಮ ಧ್ಯೇಯ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಸಾಹುಕಾರ ಎನ್ ಕುಮಸಗಿ, ಶ್ರಿಶೈಲಗೌಡ ಪಾಟೀಲ, ರಾಯಗೊಂಡ ಬಿರಾದಾರ ಹಾಗೂ ಇತರರು ಇದ್ದರು.