ಗೋಕಾಕ: ಅರಬಾವಿ ಮತಕ್ಷೇತ್ರದ 34 ಗ್ರಾ .ಪಂ ಗಳಿಗೆ ಹಾಗೂ 4 ಪಟ್ಟಣ ಪಂಚಾಯತ್, ಪುರಸಭೆ ಗಳಿಗೆ ಸ್ಯಾನಿಟೈಸರ್ , ಮಾಸ್ಕ್ ಯುವ ಮುಖಂಡ ” ರಾಹುಲ್ ಜಾರಕಿಹೊಳಿ” ಅವರು ವಿತರಿಸಿದರು.
ಹಳ್ಳಿಗಳಲ್ಲಿ ಕೊರೋನಾ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತಗಳಿಗೆ ರಾಹುಲ್ ಅವರು ಮಾಸ್ಕ್, ಸ್ಯಾನಿಟೈಸರ್ ವಿತರಿಸಿ, ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮೀಣ ಜನತೆ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದರು
ಈ ವೇಳೆ ಪಾಂಡು ಮನ್ನಿಕೇರಿ, ಲಕ್ಷ್ಮಣ ಮುಸಗುಪ್ಪಿ, ಮಂಜು ಸಣಕ್ಕಿ, ಲಗಮಣ್ಣ ಕಲಸನ್ನವರ, ಕಲ್ಲಪ್ಪಗೌಡರ ಲಕ್ಕಾರ, ಜಡೆಪ್ಪಾ ಮಂಗಿ, ಎಚ್ ವಿ. ನಾಯಕ, ಮಾರುತಿ ಕಮತಿ , ಲಕ್ಷ್ಮಣ ಆಲಕ್ಕನವರ ಮುರಳಿ ಬಡೀಗೆರ, ಮರೆಪ್ಪ ಮರೆಪ್ಪಗೋಳ, ಮಲ್ಲಿಕಾರ್ಜುನ ಕಬ್ಬೂರ, ನಿಜಗುಣಿ ಅಥಣಿ, ಚಂದ್ರು ಮೋಟೆಪ್ಪಗೋಳ, ರಮೇಶ್ ಬಿಳಕುಂದಿ, ಮಹೇಶ್ ಚಿಕ್ಕೋಡಿ, ಹಾಗೂ ಅನೇಕ ಪಂಚಾಯತ್ ಸದಸ್ಯರು ಇತರರು ಇದ್ದರು.