ಗೋಕಾಕ: ಸತೀಶ ಶುಗರ್ಸ್ ಲಿಮಿಟೆಡ್ ವತಿಯಿಂದ ಗೋಕಾಕ ಶಹರ ಹಾಗೂ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ನಗರದ ಬಸವೇಶ್ವರ ವೃತ್ತದಲ್ಲಿ ಇಂದು ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಿದರು.
“ಕೋವಿಡ್-19 ಹರಡದಂತೆ ತಡೆಯಲು ಸಾರ್ವಜನಿಕರನ್ನು ನಿರಂತರವಾಗಿ ಜಾಗೃತಗೊಳಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಅವರು ತಮ್ಮ ಪ್ರಾಣದ ಹಂಗು ತೊರೆದು ಜನರ ರಕ್ಷಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ, ಅವರಿಗೆ ನೈತಿಕ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.
“ನಮ್ಮ ಸುರಕ್ಷತೆಯಲ್ಲಿ ನಿರತರಾಗಿರುವ ಕೋವಿಡ್ ವಾರಿಯರ್ಸ್ ಗಳಾದ ಪೊಲೀಸರು, ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಪತ್ರಕರ್ತರು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು” ಎಂದು ರಾಹುಲ್ ಅವರು ಮನವಿ ಮಾಡಿದರು.
ಸಹಾಯದ ಅಭಯಹಸ್ತ:
“ಯಾವುದೇ ಸಂದರ್ಭದಲ್ಲೂ ಕೂಡ ತಂದೆಯವರಾದ ಸತೀಶ ಜಾರಕಿಹೊಳಿ ಅವರು ಜನರ ನೆರವಿಗೆ ಸದಾ ಸಿದ್ಧವಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಕೂಡ ನಿಮಗೆ ಅಗತ್ಯ ಸಹಕಾರ ಕಲ್ಪಿಸಲಿದ್ದೇವೆ. ಕೊರೊನಾ ವಾರಿಯರ್ಸ್ ಗಳು ಹಾಗೂ ಜನರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ” ಎಂದು ಅಭಯಹಸ್ತ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ್, ಮುಖಂಡರಾದ ವಿವೇಕ ಜತ್ತಿ, ಪಾಂಡು ರಂಗಸುಬೆ, ಪಾಂಡು ಮನ್ನಿಕೇರಿ, ವಿಠ್ಠಲ ಪರಸನ್ನವರ, ಅರವಿಂದ ಕರ್ಚಿ, ಮಾರುತಿ ಗುಟಗುದ್ದಿ, ಮಹೇಶ ಚಿಕ್ಕೋಡಿ, ಪ್ರಕಾಶ ಬಸಾಪುರೆ ಸೇರಿ ಇನ್ನಿತರರು ಇದ್ದರು.
https://www.facebook.com/watch/?v=746179782727708