ಗೋಕಾಕ: “ಬಸವೇಶ್ವರರು ಮತ್ತು ಶಿವಾಜಿ ಮಹಾರಾಜರು ಎಲ್ಲರೂ ಸಮಾನರು ಎಂಬ ತತ್ವ ಹೊಂದಿದ್ದರು. ಎಲ್ಲರಿಗೂ ಸಮಾನತೆ ದೊರಕಿಸಿಕೊಡಲು ಹಗಲಿರುಳು ಶ್ರಮಿಸಿದ್ದರು” ಎಂದು ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
“ಹಿಂದೂ ಧರ್ಮದ ಸುಧಾರಣೆ ಹಾಗೂ ಧರ್ಮವನ್ನು ಗಟ್ಟಿಗೊಳಿಸಲು ಇಬ್ಬರ ಕೊಡುಗೆಯೂ ಅಪಾರವಾಗಿದೆ. ಇಬ್ಬರೂ ಕೂಡ ಮಹಿಳೆಯರ ಬಗ್ಗೆ ಗೌರವ ಹೊಂದಿದ್ದರು. ಶಿವಾಜಿ ಮಹಾರಾಜರು ಶೌರ್ಯ, ಸಾಹಸ, ಪರಾಕ್ರಮದ ಸಂಕೇತವಾದರೇ, ಬಸವೇಶ್ವರರು ಶಾಂತಿ, ಸಮಾನತೆ, ಸ್ವಾತಂತ್ರ್ಯ, ಸೌಹಾರ್ದತೆಯ ಪ್ರತೀಕವಾಗಿದ್ದಾರೆ” ಎಂದರು.
ಮಹಾನ್ ವ್ಯಕ್ತಿಗಳ ತತ್ವಾದರ್ಶ ಅಳವಡಿಸಿಕೊಳ್ಳಿ:
ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಮಾತನಾಡಿ, “ಬಸವೇಶ್ವರರು ಹಾಗೂ ಶಿವಾಜಿ ಮಹಾರಾಜರು ಇಡೀ ವಿಶ್ವಕ್ಕೆ ಮಾದರಿ ವ್ಯಕ್ತಿಗಳಾಗಿದ್ದಾರೆ. ಇಬ್ಬರು ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ ಜತ್ತಿ, ಪಾಂಡು ಮನ್ನಿಕೇರಿ, ವಿಠ್ಠಲ ಪರಸನ್ನವರ ಸೇರಿ ಇನ್ನಿತರರು ಇದ್ದರು.