ಬೆಳಗಾವಿ: ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಸನ್ಮಾನಿಸಿದರು.
ಇಲ್ಲಿನ ಸದಾಶಿವ ನಗರ ತಮ್ಮ ನಿವಾಸದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಪ್ರೋತ್ಸಾಹಧನ ನೀಡುವ ಮೂಲಕ ಅಭಿನಂದಿಸಿದರು.
ಶೇ 97 ರಷ್ಟು ಫಲಿತಾಂಶ ಪಡೆದು ಹುಕ್ಕೇರಿ ತಾಲೂಕಿಗೆ ಪ್ರಥಮ ಬಂದ ಜ್ಯೋತಿಬಾ ಬಾಗೇವಾಡಿ, ರೋಹಿಣಿ, ಪ್ರಶಾಂತ ಪಾಟೀಲ್, ಪ್ರಶಾಂತ ಪೂಜಾರಿ, ಜಯಲಕ್ಷ್ಮಿ, ಸುನಿತಾ ಪಾರಿಶವಾಡ್, ರಾಹುಲ್ ಕುಡಚಿ, ರೇಣುಕಾ ಸನದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಸದಸ್ಯ ಸಿದ್ದು ಸುಣಗಾರ್, ಮಾಜಿ ಎಪಿಎಂಸಿ ಅಧ್ಯಕ್ಷ ಆನಂದ ಪಾಟೀಲ್ ಮುಂತಾದವರು ಇದ್ದರು