ಬೆಳಗಾವಿ: ಗೋಕಾಕ ತಾಲೂಕಿನ ಅರಬಾವಿ ಕ್ಷೇತ್ರದ ಹೊಸಟ್ಟಿ, ಹುಣಶ್ಯಾಳ, ಬಿನಸಕೊಪ್ಪ, ಡವಳೇಶ್ವರ, ಮನ್ನಾಪೂರ ಗ್ರಾಮಗಳಿಗೆ ಭೇಟಿ ನೀಡಿ, ತಂದೆ ಪರ ಯುವ ನಾಯಕ ರಾಹುಲ್ ಜಾರಕಿಹೊಳಿ ಅಬ್ಬರ ಪ್ರಚಾರ ನಡೆಸಿದರು.
ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದೆ. ಬೆಲೆ ಏರಿಕೆಯಿಂದ ಕೆಳವರ್ಗದ ಜನತೆ ಜೀವನ ನಡೆಸುವುದು ದುಸ್ತರವಾಗಿದೆ, ಬಿಜೆಪಿ ಅಧಿಕಾರ ಕೊಡಿ ಎಂದು ಮತ್ತೇ ಹಂಬಲಿಸುತ್ತಿದೆ. ಆದರೆ, ಜನತೆ ಕಷ್ಟಕ್ಕೆ ಸ್ಪಂದಿಸುವ ನಾಯಕ, ಜನರೊಡನೆ ಬೆರೆಯುವ ಉತ್ತಮ ನಾಯಕನ ಸತೀಶ ಜಾರಕಿಹೊಳಿರನ್ನು ಆಯ್ಕೆ ಮಾಡಿ ಎಂದು ರಾಹುಲ್ ಜಾರಕಿಹೊಳಿ ತಂದೆ ಮತಯಾಚಿಸಿದರು.
ಈ ಬಿಜೆಪಿಗೆ ಅಧಿಕಾರ ಬೇಕಾಗಿದೆ ಹೊರತು, ಅಭಿವೃದ್ಧಿಯಲ್ಲ ಜನತೆಗೆ ಸುಳ್ಳು ಆಶ್ವಾಸನೆ ನೀಡುತ್ತಿದೆ. ಆದರೆ, ಆಶ್ವಾಸನೆ ಈಡೇರಿಸುವ ನಾಯಕ ಬೇಕಾಗಿದ್ದಾರೆ ಮತದಾರರು ಕಾಂಗ್ರೆಸ್ ನ್ನು ಬೆಂಬಲಿಸಿ, ಗೆಲ್ಲಿಸಿದರೆ ಪ್ರತಿ ಕಷ್ಟಗಳಿಗೂ ಸ್ಪಂಧಿಸುವ ಕರ್ತವ್ಯ ನಮ್ಮದು ಅದಕ್ಕಾಗಿ ` ಕೈ’ ಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.