ಬೆಳಗಾವಿ: ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಹೋಗುವ ಸಮರ್ಥ ಜನನಾಯಕ `ಶಾಸಕ ಸತೀಶ ಜಾರಕಿಹೊಳಿ’ ಯವರಿಗೆ ಎಲ್ಲಾ ಮತದಾರರು ಕೈ ಜೋಡಿಸಿ ಎಂದು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಗೋಕಾಕ ತಾಲೂಕಿನ ಸೋಮವಾರ ದುಪಧಾಳ, ಘಟಪ್ರಭಾ ಮತ್ತು ಮಲ್ಲಾಪೂರ ಪಿ.ಜಿ, ಪಾಮಲದಿನ್ನಿ ಗ್ರಾಮಗಳಿಗೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ, ತಂದೆ ಪರ ಪ್ರಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಬಹುಮತಗಳ ಅಂತರದಿಂದ ಗೆಲುವು ಸಾಧಿಸಲು ನೀವು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಮಲ್ಲಾಪೂರ ಪಿ.ಜಿ ಗ್ರಾಮದ ಸಮತಾ ಸೈನಿಕ ದಳದ ಕಾರ್ಯಾಲಯದಲ್ಲಿ ಬಾಬು ಜಗಜೀವನರಾಮ ಜಯಂತಿ ಆಚರಿಸಲಾಯಿತು.