ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತಕ್ಷೇತ್ರದ ಮತದಾರರು ಸ್ವಾಭಿಮಾನ ಹಾಗೂ ಜನಪರ ನಾಯಕತ್ವಕ್ಕೆ ಗೌರವ ನೀಡಬೇಕು. ಸತೀಶ್ ಜಾರಕಿಹೊಳಿ ಅವರನ್ನು ತಮ್ಮ ಪ್ರತಿನಿಧಿಯನ್ನಾಗಿ ಲೋಕಸಭೆಗೆ ಕಳುಹಿಸಬೇಕು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮನವಿ ಮಾಡಿದರು.
ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೆ ಬೆಂಬಲ ಸೂಚಿಸಿ, ಅವರಿಗೆ ಶಾಲು ಹೊದಿಸಿ, ಬಸವಣ್ಣನವರ ಭಾವಚಿತ್ರ ನೀಡಿ ಗೌರವಿಸಿದರು. ಬಳಿ ಮಾತನಾಡಿ, ಬಾಬಾಗೌಡ ಪಾಟೀಲರ ಪ್ರತಿನಿಧಿತ್ವದ ನಂತರದ 17 ವರ್ಷಗಳ ಕಾಲ ಬೆಳಗಾವಿ ಲೋಕಸಭೆ ಕ್ಷೇತ್ರವು ಸ್ವಾಭಿಮಾನದ ಪ್ರತಿನಿಧಿತ್ವ ಇಲ್ಲದ ಕಾರಣ ತನ್ನ ಗೌರವವನ್ನು ಕಳೆದುಕೊಂಡಿದೆ ಎಂದರು.
17 ವರ್ಷಗಳ ಕಾಲ ಅಧಿಕಾರ ಕಂಡರೂ ಸಂಪಿಗೆ ರಸ್ತೆಯ ಮನೆ, ಎಂದೂ ದಾಸೋಹದ ಮನೆಯಾಗಲಿಲ್ಲ. ಲಾನ್‍ಡೌನ್‍ನಂತಹ ಗಂಭೀರ ಸಮಯದಲ್ಲೂ ಜನರ ನೆರವಿಗೆ ಬರಲಿಲ್ಲ. ಅನುಕಂಪ ಮೂಡ ಬಹುದಾದ ಯಾವ ತ್ಯಾಗ, ಬಲಿದಾನ, ದಾನ-ಧರ್ಮ ಇಲ್ಲ. ಕ್ಷೇತ್ರದ ಜನರು ಸಮರ್ಥ ನಾಯಕನ ಆಯ್ಕೆಗೆ ನಿರ್ಧರಿಸಬೇಕು.
ಮಾನವ ಬಂಧುತ್ವ ವೇದಿಕೆಯ ಮೂಲಕ ಮೂಢ ನಂಬಿಕೆಗಳ ವಿರುದ್ಧ ನಾಡಿನಾದ್ಯಂತ ಜಾಗೃತಿ ಮೂಡಿಸುತ್ತಿರುವ, ಯುವ ಜನತೆಗೆ ಶಕ್ತಿಯಾಗಿರುವ, ಬಸವಣ್ಣನವರ ಲಿಂಗೈಕ್ಯೆಯ ದಿನವಾಗಿರುವ ಬಸವ ಪಂಚಮಿಯನ್ನು ವೈಚಾರಿಕ ಚಿಂತನೆಗಳಿಗೆ ವೇದಿಕೆಯಾಗಿಸಿರುವ, ಬಸವ ಪಂಚಮಿಯೆಂದು ನಮ್ಮ ಮಕ್ಕಳಿಗೆ ಹಾಲು ಕುಡಿಸುವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಎರಡು ಬಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಸ್ವಾಭಿಮಾನವನ್ನು ಎತ್ತಿ ಹಿಡಿದಿರುವ ಸತೀಶ ಜಾರಕಿಹೋಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.