ಗೋಕಾಕ: ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಪರ ಇಂದು ತುರುಸಿನ ಪ್ರಚಾರ ನಡೆಸಿದರು.
ತಾಲೂಕಿನ ಬೆಣಚಿನಮರಡಿ, ಉರಬಿನಟ್ಟಿ, ಗಡ್ಡಿಹೊಳಿ, ಶೀಗಿಹೊಳಿ, ಕುಂದರಗಿ, ದಾಸನಟ್ಟಿ, ಮೂಡಲಗಿ ಗ್ರಾಮಗಳಲ್ಲಿ ಪ್ರಿಯಾಂಕಾ ಅವರು ಮನೆಮನೆಗೆ ತೆರಳಿ ಮತಯಾಚಿಸಿದರು.
ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, “ಸುಧೀರ್ಘ ರಾಜಕೀಯ ಅನುಭವವನ್ನು ಹೊಂದಿರುವ ಸತೀಶ ಜಾರಕಿಹೊಳಿ ಅವರು ಸಂಸತ್ ಸದಸ್ಯರಾಗಲು ಅರ್ಹ ಅಭ್ಯರ್ಥಿಯಾಗಿದ್ದಾರೆ. ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸತೀಶ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ, ಗೆಲ್ಲಿಸುವಂತೆ” ಮನವಿ ಮಾಡಿದರು.
ಇದೇ ವೇಳೆ ಪ್ರಿಯಾಂಕಾ ಅವರು ಮೂಡಲಗಿಯ ಚರ್ಚ್ ಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಪರವಾಗಿ ಪ್ರಿಯಾಂಕಾ ಅವರನ್ನು ಸತ್ಕರಿಸಲಾಯಿತು.
ಮುಖಂಡರಾದ ಪಾಂಡು ಮನ್ನಿಕೇರಿ, ಆನಂದ ಪಾಟೀಲ್, ಭರಮಣ್ಣ ತೋಳಿ ಸೇರಿದಂತೆ ನೂರಾರು ಕಾರ್ಯಕರ್ತರು, ಗ್ರಾಮಸ್ಥರು ಪ್ರಚಾರದಲ್ಲಿ ಭಾಗವಹಿಸಿದ್ದರು.