Breaking News

ಯಮಕನಮರಡಿ ಕ್ಷೇತ್ರದಲ್ಲಿ ಎರಡು ವರ್ಷದೊಳಗೆ “ಉನ್ನತ ಮಟ್ಟ ಶಿಕ್ಷಣ “ಯೋಜನೆ ಕಾರ್ಯರೂಪಕ್ಕೆ: ಶಾಸಕ ಸತೀಶ ಜಾರಕಿಹೊಳಿ ಭರವಸೆ.


ಬೆಳಗಾವಿ: ಯಮಕನಮರಡಿ ಕ್ಷೇತ್ರದಲ್ಲಿ  ಬಡ ಜನರಿಗೆ ಉನ್ನತ ಮಟ್ಟ ಶಿಕ್ಷಣ  ದೊರೆಯಲಿ ಎಂಬ ಮಹಾತ್ವಾಂಕಾಕ್ಷೆಯಿಂದ  ಯೋಜನೆಯೊಂದನ್ನು ರೂಪಿಸಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಹೇಳಿದ್ದಾರೆ.

ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಪದವಿ ಪೂರ್ವ ಕಾಲೇಜು, ಮಹರ್ಷಿ ವಾಲ್ಮೀಕಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭವನಕ್ಕೆ ಮಂಗಳವಾರ  ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ  200 ಕ್ಕೂ ಹೆಚ್ಚು ಖುರ್ಚಿ, ಟಿಪಾಯಿ ಹಾಗೂ ಸ್ಪೀಕರ್ ಕೊಡುಗೆಯಾಗಿ ನೀಡಿ ಬಳಿಕ ಮಾತನಾಡಿದರು.

ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ಕ್ಷೇತ್ರ ವ್ಯಾಪ್ತಿ ಎಲ್ಲ ಗ್ರಾಮಗಳ ಶಾಲೆ, ಕಾಲೇಜು ಮತ್ತು ಸಮುದಾಯ ಭವನಗಳಿಗೆ ಖುರ್ಚಿ, ಲ್ಯಾಬ್ ಪರಿಕರಣ ಸೇರಿ ಅಗತ್ಯ ವಸ್ತುಗಳ ಪಟ್ಟಿ ಮಾಡಿ ವಿತರಣೆ ಮಾಡಲಾಗುತ್ತಿದೆ.  ಬೇರೆಡೆಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ವಲಸೆ ಬರಬೇಕು. ಆ ನಿಟ್ಟಿನಲ್ಲಿ ಮಾದರಿ ಶಿಕ್ಷಣ ವ್ಯವಸ್ಥೆ ರೂಪಿಸಲಾಗುವುದು.  ಹತ್ತರಗಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ   ಐಟಿಐ ಕಾಲೇಜು ಆರಂಭಿಸಲಾಗುತ್ತಿದೆ ಎಂದರು.

ಈಗಾಗಲೇ ಉಳ್ಳಾಗಡಿ ಖಾನಾಪುರ ಸೇರಿ ಎಲ್ಲ ಗ್ರಾಮಗಳಲ್ಲಿ ಶಾಲಾ ಕೊಠಡಿಗಳ  ನವೀಕರಣ ಮಾಡಲಾಗುತ್ತಿದೆ. ಲ್ಯಾಬ್ , ಗ್ರಂಥಾಲಯ ಸೇರಿ ಅಗತ್ಯ ವಸ್ತುಗಳು ಪೂರೈಸಲಾಗುತ್ತಿದೆ. ವಿದ್ಯಾರ್ಥಿಗಳು  ಇದರ ಸದುಪಯೋಗ ಪಡೆದು  ಯಮಕನಮರಡಿ ಕ್ಷೇತ್ರಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಹೆಬ್ಬಾಳ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿರ್ಮಾಣ,  ಕೊಚಿರಿಯಲ್ಲಿ  ಪರಿಶಿಷ್ಟ ಸಮುದಾಯ ಕಾಲೋನಿಯಲ್ಲಿ ಕುಡಿಯುವ ನೀರು ಕಾಮಗಾರಿಗೆ ಚಾಲನೆ ನೀಡಿದರು.

ಬಸವರಾಜ ಪಂಡಿತ ಸ್ವಾಮೀಜಿ ,ಜಿಪಂ ಸದಸ್ಯ ಮಹಾಂತೇಶ ಮಗದುಮ್ಮ, ಪಾರೀಸಗೌಡಾ ಪಾಟೀಲ್, ಸುಧೀರ್ ಗಿರಿಗೌಡರ್, ರಾಜು  ಅವಟೆ, ಸಚೀನ್ ಹೆಬ್ಬಾಳೆ, ಭೀಮಪ್ಪ ಜರಳಿ , ಬಸೀರ್ ಲಾಡಖನ್, ಸಾಹೀನ್ ಹಜರದ್ ಭಾಯಿ, ಕುಶಾಲ್ ಕೋತ್, ಭರಮಗೌಡಾ ಪಾಟೀಲ್, ಸಹೀನಾಜ್ ಗಡೇಕಾಯಿ, ಲಿಂಗನಗೌಡಾ ಪಾಟೀಲ್,  ಶಿವನಗೌಡಾ ಪಾಟೀಲ್, ರವೀಂದ್ರ ನಾಯಿಕ, ಅಮೃತ್ ನಾಯಿಕ, ಅಜ್ಪಪ್ಪ ನಾಯಕ, ಇಲಿಯಾಸ್ ಇನಾಮದಾರ್, ಮಹಾದೇವ ಚೌಗಲಾ ಮುಂತಾದವರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!

ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ