ಗೋಕಾಕ: ಆಟೋಗಳಲ್ಲಿ ಗುಡ್ಸ ಸಾಮಗ್ರಿಗಳನ್ನು ಆಟೋರಿಕ್ಷಾಗಳ ಮೇಲೆ ಮತ್ತು ಒಳಗಡೆ ಹಾಕಿಕೊಂಡು ಹೊಗುತ್ತಿರುವುದನ್ನು ಖಂಡಿಸಿ ಮಿನಿಗುಡ್ಸ ಮಾಲೀಕರು ಹಾಗೂ ಚಾಲಕರು ಸಂಘ ಪ್ರತಿಭಟನೆ.
ನಗರದ ಆರ್ ಟಿ ಓ ಇಲಾಖೆ ಮುಂದೆ ನೂರಾರು ಚಾಲಕರು ಸೇರಿ ಆಟೋಗಳಲ್ಲಿ ಗುಡ್ಸ ಸಾಮಗ್ರಿಗಳನ್ನು ಆಟೋರಿಕ್ಷಾಗಳ ಮೇಲೆ ಮತ್ತು ಒಳಗಡೆ ಹಾಕಿಕೊಂಡು ಹೊಗುತ್ತಿರುವುದನ್ನು
ಇಂತಹ ಆಟೋರಿಕ್ಷಾ ಮಾಲಿಕರಿಗೆ ಮತ್ತು ಚಾಲಕರಿಗೆ ಸುಮಾರು ಸಾರಿ ಮೌಖಿಕವಾಗಿ ಮನವಿ ಮಾಡಿಕೊಂಡರು ಕೂಡಾ ಕ್ಯಾರೇ ಅನ್ನದೆ , ಮನಬಂದಂತೆ ಗುಡ್ಸ ಸಾಮಗ್ರಿಗಳನ್ನು ಹಾಕಿಕೊಂಡು ಹೊಗುತ್ತಿದ್ದಾರೆ . ಅಂತಹ ಆಟೋರಿಕ್ಷಾಗಳ ಮೇಲೆ ಸಿಜ್ ಮಾಡುವ ಮುಖಾಂತರ ದಂಡ ವಸೂಲಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗೋಕಾಕ ನಗರದಲ್ಲಿ ಸುಮಾರು ಆಟೋರಿಕ್ಷಾಗಳೂ ( ಪರ್ಮಿಟ ) ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಒಡಾಡಿಸಿಕೊಂಡು ಇರುತ್ತಾರೆ . ಇಂತಹ ಆಟೋರಿಕ್ಷಾಗಳನ್ನು ಕೂಡಲೇ ತಡೆದು ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಿನಿಗುಡ್ಡ ಮಾಲಕರು ಚಾಲಕರ ಸಂಘದಿಂದ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಸಂತೋಷ ಖಂಡ್ರೆ, ಸತ್ತೆಪ್ಫಾ ಗಣಾಚಾರಿ, ವಜ್ರಕಾಂತ ಜೋತಾವರ, ಶ್ರೀಶೈಲ ಕುಂಬಾರ ಸೇರಿದಂತೆ ನೂರಾರು ಚಾಲಕರು ಉಪಸ್ಥಿತರಿದ್ದರು.