ಗೋಕಾಕ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಜ್ಞಾನಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿ ಅವರನ್ನು ಪ್ರತಿಭಾವಂತರಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು .
ಮಂಗಳವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡೋ ಫ್ರೀ ಸ್ಕೂಲ್ ನ ಗ್ರ್ಯಾಜಿವೇಷನ್ ಡೇ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು . ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಜಗತ್ತಿಗೆ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ . ಜಗತ್ತಿನಲ್ಲಿಯೆ ಪ್ರಸಿದ್ಧಿಯಲ್ಲಿರುವ ಮಾಂಟೇಸರಿ ಪದ್ದತಿಯಲ್ಲಿ ಕಲಿಸಬೇಕಾಗಿದೆ .
ಪ್ರಾಯೋಗಿಕ ಕಲಿಕೆಯಿಂದ ಮಕ್ಕಳು ಬೇಗ ಕಲಿತು ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾರೆ . ಇಂತಹ ಪದ್ಧತಿಯನ್ನು ನಮ್ಮ ಸಂಸ್ಥೆಯ ಶಾಲೆಯಲ್ಲಿ ಆಳವಡಿಸಲಾಗಿದ್ದು , ಪಾಲಕರು ಇದರ ಸದುಪಯೋಗದಿಂದ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೋಳಿಸಿ ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ಗಣ್ಯರು ಮೊದಲನೇಯ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಗ್ರ್ಯಾಜಿವೇಷನ್ ಪ್ರಶಸ್ತಿಯನ್ನು ವಿತರಿಸಿದರು . ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಸುವರ್ಣಾ ಭೀಮಶಿ ಜಾರಕಿಹೊಳಿ ಉದ್ಘಾಟಿಸಿದರು ವೇದಿಕೆಯ ಮೇಲೆ ಜನ್ ಪಾರ್ಕ ಕಿಡ್ಸ್ ಸ್ಕೂಲನ್ ಮೀನಾಕ್ಷಿ ಪೂಜೇರಾ , ಎಸ್.ಎಲ್.ಜೆ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅರುಣ್ ಪೂಜೇರಾ , ಮುಖ್ಯೋಪಾಧ್ಯಾಯರುಗಳಾದ ಬಿ.ಕೆ ಕುಲಕರ್ಣಿ , ಎಚ್.ವಿ.ಪಾಗನಿಸ , ಪಿ.ವಿ.ಚಚಡಿ ಹಾಗೂ ಶಿಕ್ಷಕಿ ಮನೀಷಾ ಮಾಂಗಳೇಕರ ಇದ್ದರು .