ಗೋಕಾಕ : ನಗರದ ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಆಚರಣೆ ಮಾಡಿದರು.
ಈ ಸಮಯದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಸನತ್ ಜಾರಕಿಹೊಳಿ ಅವರು ಮಾತನಾಡಿ ಕರ್ನಾಟಕ ಕೀರ್ತನಾ ಸಾಹಿತ್ಯದ ಮೂಲಕ ಮನುಜ ಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ದು, ಸಮ ಸಮಾಜ ನಿರ್ಮಾಣಕ್ಕಾಗಿ ಅರಿವು ಮೂಡಿಸಿದವರು. ಕೀರ್ತನಕಾರರಾಗಿ, ಸಂತರಾಗಿ, ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅವರು ನೀಡಿರುವ ಕೊಡುಗೆಗಳು ಅನನ್ಯ ಎಂದು ತಿಳಿಸಿದರು.
ನಂತರ ಸನತ್ ಜಾರಕಿಹೊಳಿ ಅವರಿಗೆ ಶಿಕ್ಷಕ ಬಳಗದವರಿಂದ ರೇಷ್ಮೆ ಪಟಗ,ಕಂಬಳಿ ಹಾಗೂ ಕನಕದಾಸರ ಭಾವಚಿತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಚ್ ಎಸ್ ಅಡಿಬಟ್ಟಿ ಅವರು ಕನಕದಾಸರ ಜೀವನ ಚರಿತ್ರೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಐ.ಎಸ್.ಪವಾರ, ಎ.ಬಿ.ಪಾಟೀಲ, ಜಿ.ಆರ್.ನಿಡೋಣಿ, ಅರುಣ ಪೂಜೆರ, ಆರ್.ಎಂ.ದೇಶಪಾಂಡೆ, ಎಚ್.ವ್ಹಿ ಪಾಗನಿಸ್, ಪಿ.ವ್ಹಿ.ಚಚಡಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.