Breaking News

ಶಾಂಭವಿಶ್ರೀ ಅವಾಡ್ರ್ಸ 2022; ಶ್ರೀ ವೇದಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರೀಜಿಯವರ ಕಾರ್ಯ ಮಾದರಿ: ಸರ್ವೋತ್ತಮ ಜಾರಕಿಹೊಳಿ


ಗೋಕಾಕ ಫೆ, 9 ;- ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ನಾಡಿನಾದ್ಯಂತ ಪರಿಚಯಿಸುತ್ತಿರುವ ಕೆಲಸವನ್ನು ಕಾರ್ಯಕ್ರಮದ ರೂವಾರಿಗಳಾದ ಬೈಲಹೊಂಗಲದ ಶ್ರೀ ವೇದಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರೀಜಿಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತ ಎಸ್.ಎಮ್.ಹಿರೇಮಠ ಅವರು ಹೇಳಿದರು.

ಬುಧವಾರದಂದು ನಗರದ ನಗರಸಭೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಉತ್ತರ ಕರ್ನಾಟಕದ ಅತೀ ದೊಡ್ಡ ಸಿಂಗಿಂಗ್ ಕಾಂಪಟೇಶನ್ ಶಾಂಭವಿಶ್ರೀ ಅವಾಡ್ರ್ಸ 2022 ರ ಗೋಕಾಕನ ಪ್ರಥಮ ಹಂತದ ಆಡಿಶನ್ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಕ್ಷ್ಮೀ ಏಜ್ಯಕೇಶನ್ ಟ್ರಸ್ಟನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಶ್ರೀ ವೇದಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರೀಜಿಯವರ ಕಾರ್ಯ ಮಾದರಿಯಾಗಿದ್ದು, ಯುವ ಪೀಳಿಗೆ ಇಂತಹ ಕಾರ್ಯಕ್ರಮಗಳ ಸದುಪಯೋಗದಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಪ್ರತಿಭಾನ್ವಿತರಾಗಿ ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ವೇದಮೂರ್ತಿ ಮಹಾಂತಯ್ಯ ಆರಾದ್ರಿಮಠ ಸ್ವಾಮೀಜಿಯವರು ವಹಿಸಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತ ರವಿ ಹುಲಕುಂದ, ಶಿಕ್ಷಕ ಭವಾನಿಕೊಂದು ನಾಯಕ್ ಇದ್ದರು.

ಉತ್ತರ ಕರ್ನಾಟಕದ ಅತೀ ದೊಡ್ಡ ಸಿಂಗಿಂಗ್ ಕಾಂಪಟೇಶನ್ ಶಾಂಭವಿಶ್ರೀ ಅವಾಡ್ರ್ಸ 2022 ನ ಮುಂದಿನ ಹಂತಗಳಲ್ಲಿ ಆಡಿಶನ್ ಕಾರ್ಯಕ್ರಮವು ಬರುವ ದಿ. 13 ರಂದು ಸವದತ್ತಿಯ ಆನಂದ ಮಾಮನಿ ಕಲ್ಯಾಣ ಮಂಟಪ, ದಿ. 20 ರಂದು ಗದಗನ ವೀರೇಶ್ವರ ಪುಣ್ಯಾಶ್ರಮ ಶಾಲಾ ಆವರಣ ಹಾಗೂ ದಿ. 27 ರಂದು ಬೈಲಹೊಂಗಲದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಕಾಲೇಜನಲ್ಲಿ ನಡೆಯಲಿದೆ.

ಈ ಆಡಿಶನ್ ಕಾಂಪಟೇಶನ್ ಕಾರ್ಯಕ್ರದಲ್ಲಿ 150 ಕ್ಕೂ ಹೆಚ್ಚು ಗಾಯಕರು ಪಾಲ್ಗೊಂಡಿದ್ದರು.

ಕುಮಾರ ಬೋರಕನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ