*ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದಲ್ಲಿ “ರಾಷ್ಟ್ರೀಯ ಯುವ ದಿನ” ಆಚರಣೆ.*
ಗೋಕಾಕ: ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ಯವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಯ್ ಎಸ್ ಪವಾರ ಮಾತನಾಡಿ,ಯವಕರ ಜೀವನ ಅತೀ ಮುಖ್ಯ ಪಾತ್ರ ವಹಿಸುವದ್ದಾಗಿರುತ್ತದೆ.ಸ್ವಾಮಿ ವಿವೇಕಾನಂದರು ಹೇಳಿರುವಂತೆ ಯುವಕರು ಈ ದೇಶದ ಆಸ್ತಿಯಿದ್ದಂತೆ ಎಲ್ಲ ವಿಭಾಗದಲ್ಲಿ ಯುವಕರು ಹೆಚ್ಚಿನ ಆಸಕ್ತಿ ವಹಿಸಿ ಉತ್ತಮ ಸ್ಥಾನಕ್ಕೆ ಏರಬೇಕು.ಯುವಶಕ್ತಿಗೆ ವಿವೇಕಾನಂದರ ಪ್ರೇರಣೆ ನಿಮಗಿರಲಿ ಎಂದು ಆಶಾಭಾವ ವ್ಯಕ್ತ ಪಡಿಸಿದರು.
ಪ್ರಾಚಾರ್ಯರಾದ ಜಿ.ಆರ್ .ನಿಡೋಣಿ ಮಾತನಾಡಿ,೧೬೦ ನೇ ಸ್ವಾಮಿ ವಿವೇಕಾನಂದ ಜಯಂತಿ ಇದು ಮಹತ್ವದ ಘಟ್ಟ.ವಿವೇಕಾನಂದರು ಜಾಗತ್ತಿಕ ಮಟ್ಟದಲ್ಲಿ ಹೆಸರನ್ನ ಮಾಡಿರುವಂಥದ್ದು.ಅನೇಕ ಮಹಾನ್ ವ್ಯಕ್ತಿಗಳು ವಿವೇಕಾನಂದರ ತತ್ವಗಳನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಉತ್ತುಂಗಕ್ಕೆ ಏರಿದ ಉದಾಹರಣೆಗಳಿವೆ ಅಂತಹ ವ್ಯಕ್ತಿ ನೀವಾಗಬೇಕು.ಪ್ರತಿಯೊಬ್ಬ ಮನುಷ್ಯ ಬದುಕಿದ್ದಾಗ ಏನಾದರೂ ಒಂದು ಸಾಧನೆ ಮಾಡಬೇಕು ಎಂಬ ತತ್ವವನ್ನು ಅಳವಡಿಸಿಕೊಂಡ ಅರುಂಧತಿ ಸಿನ್ಹಾ ಅವರು ಸಾಧನೆ ಮಾಡಿ ತೋರಿಸಿದ್ದಾರೆ ಇದಕ್ಕೆ ಕಾರಣ ಸ್ವಾಮಿ ವಿವೇಕಾನಂದರ ತತ್ವಗಳೇ ಸ್ಪೂರ್ತಿಯಾಗಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಇದರಿಂದ ಹೆಚ್ಚಿನ ಲಾಭ ವಿದ್ಯಾರ್ಥಿ ಜೀವನದಲ್ಲಿ ಆಗುತ್ತದೆ.ಹೀಗಾಗಿ ಸ್ವಾಮಿ ವಿವೇಕಾನಂದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಅವರಂತೆ ಬಾಳಲು ಪ್ರಯತ್ನಿಸಿದರೆ ಸಾಧನೆ ಸರಳವಾಗುತ್ತದೆ ಎಂದರು.ಏಳು ಏದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು ಎಂಬ ತತ್ವದಂತೆ ನಿಮ್ಮ ಗುರಿ ಮುಟ್ಟುವ ತನಕ ವಿಶ್ರಮಿಸದಿರಿ ಎಂದು ಹೇಳಿದರು.
ನಂತರ ಉಪನ್ಯಾಸಕರಾದ ಎ ಅಣ್ಣಿಕೇಟಿ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಯುವ ಜನತೆಗೆ ” ನೀವು ಗುರಿ ಮುಟ್ಟವ ತನಕ ನಿಲ್ಲದಿರಿ, ನಿಮ್ಮಲ್ಲಿ ಎಲ್ಲಾ ರೀತಿಯ ಶಕ್ತಿ ಇದ್ದು ಏನು ಬೇಕಾದರೂ ಸಾಧಿಸಬಹುದು, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉನ್ನತ ವ್ಯಕ್ತಿತ್ವದ ಬೆಳೆಸಿಕೊಳ್ಳಿ ಎಂದರು.
ಈ ವೇಳೆ ಪ್ರಾಚಾರ್ಯರಾದ ಜಿ.ಆರ್.ನಿಡೋಣಿ,ಮುಖ್ಯ ಅತಿಥಿಗಳಾದ ಆಯ್ ಎಸ್ ಪವಾರ,ಶಿಕ್ಷಕಿಯರಾದ ಪ್ರತಿಭಾ ನಿಂಬಾಳಕರ, ಎ ಅಣ್ಣಿಕೇಟ್ಟಿ, ಜ್ಯೋತಿಬಾ ತಳವಾರ ಸೇರಿದಂತೆ ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿಗಳು ಹಾಜರಿದ್ದರು.