*ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಮೊದಲನೆಯ ಬಾರಿ ಪೂಜೆ ಕಾರ್ಯಕ್ರಮ ನಡೆಸಿದ ಅಯ್ಯಪ್ಪನ ಭಕ್ತ ವೃಂದ ಹಾಗೂ ಕಾರ್ಖಾನೆಯ ಸಿಬ್ಬಂದಿಗಳು..*
:ಕಾರ್ತಿಕ ಮಾಸ ಆಯ್ಯಪನ ಭಕ್ತರ ಪಾಲಿಗೆ ಇದೊಂದು ಹಬ್ಬ,
ನಾಡಿನಾದ್ಯಂತ ಅಯ್ಯಪ್ಪನ ಭಕ್ತರು ಈ ಒಂದು ಕಾರ್ತಿಕ ಮಾಸದಲ್ಲಿ ಮಾಲಾ ಧಾರಣೆ ಮಾಡಿ ಅಯ್ಯಪ್ಪನ ದರ್ಶನಕ್ಕೆ ಹೋಗುತ್ತಾರೆ.
ತುಂಬಾ ಕಠಿಣ ವಾದ ವಿದಿ ವಿಧಾನ ಗಳೊಂದಿಗೆ ಈ ಒಂದು ವ್ರತವನ್ನು ಮಾಡಿ ಅಯ್ಯಪ್ಪನ ಭಕ್ತರು ಶಬರಿ ಗಿರಿಗೆ ತೆರಳುತ್ತಾರೆ ನಾಡಿನಾದ್ಯಂತ ಈ ಒಂದು ಪರಂಪರೆ ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದಿದೆ.
ಇಂಥ ವಿಶಿಷ್ಟ ಪೂಜೆ ಯನ್ನ ಸಂತೋಷ್ ಜಾರಕಿಹೊಳಿ ಅವರು ತಮ್ಮ ಕಾರ್ಖಾನೆಯಲ್ಲಿ ಭಕ್ತರು ಹಾಗೂ ಸೀಬ್ಬಂದಿಗಳೆಲ್ಲ ಸೇರಿಸಿ ಆಚರಣೆ ಮಾಡೋಣ ಅಂತ ಹೇಳಿದ್ದಕ್ಕೆ ಸಾಹುಕಾರ ರಿಗೆ ಹೇಳಿ ಅತ್ಯಂತ ಅದ್ಧೂರಿ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.
ಅಯ್ಯ ಪ್ಪನ ಮಾಲಾ ದಾರಿ ಗಳೆಲ್ಲ ಸೇರಿ ಈ ಒಂದು ಪೂಜೆಯನ್ನು ಅತ್ಯಂತ ವಿಜೃಂ ಬಣೆಯಿಂದ ಪೂಜೆ, ಪುನಸ್ಕಾರ , ವಿವಿಧ ಬಗೆಯ ಭಜನೆ ಹಾಗೂ ಕರ್ಪೂರ ಆರತಿ ಗಳೊಂದಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಿದರು.
ಈ ಒಂದು ಶುಭ ಸಂಧರ್ಭ ದಲ್ಲಿ ಕಾರ್ಖಾನೆಯ ಸಿಬ್ಬಂದಿಗಳು ಕೈ ಜೋಡಿಸಿ ಎಲ್ಲ ರೀತಿಯ ಸಹಕಾರ ಕೊಟ್ಟು ಪೂಜೆ ಯನ್ನಾ ವಿಜ್ರಂಭಣೆಯಿಂದ ನಡೆಸಿ ಕೊಟ್ಟರು