Breaking News

ರಾಷ್ಟ್ರೀಯ ಗಣಿತ ದಿನ ಆಚರಣೆಯ ಕಾರ್ಯಕ್ರಮವನ್ನ ಉದ್ಘಾಟಿಸಿದ ಯುವ ನಾಯಕ ಸನತ್ ಜಾರಕಿಹೊಳಿ


ಗೋಕಾಕ : ಗಣಿತ ವಿಷಯದಲ್ಲಿ ಫೆಲೋಸಿಫ್ ಪಡೆದ ಪ್ರಥಮ ಭಾರತೀಯ ಶ್ರೀನಿವಾಸ ರಾಮಾನುಜ : ಬಿ ಕೆ ಕುಲಕರ್ಣಿ

ಗಣಿತ ತಜ್ಞ ಶ್ರೀನಿವಾಸ ರಾಮಾನುಜ ಅವರು ಗಣಿತ ಲೋಕಕ್ಕೆ ನೀಡಿದ ಕೊಡುಗೆಯ ನೆನಪಿಗಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಎಸ್.ಎಲ್.ಜೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ ಕೆ ಕುಲಕರ್ಣಿ ಹೇಳಿದರು .

ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಆಚರಿಸಲಾದ ರಾಷ್ಟ್ರೀಯ ಗಣಿತ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು .

ಗಣಿತ ಶಾಸ್ತ್ರದಲ್ಲಿ ಸಂಖ್ಯಾ ಪದ್ದತಿ , ಪ್ರಮೇಯ ಹಾಗೂ ಗಣಿತ ಸೂತ್ರಗಳನ್ನು ನೀಡಿ ಗಣಿತ ವಿಷಯದಲ್ಲಿ ಶ್ರೀನಿವಾಸ ರಾಮಾನುಜ ಅವರ ಫೆಲೋಸಿಫ್ ಪಡೆದ ಪ್ರಥಮ ಭಾರತೀಯರಾಗಿದ್ದಾರೆ .

ಅವರು ನೀಡಿದ ಗಣಿತ ಸೂತ್ರಗಳು ಸ್ವರ್ವಕಾಲಕ್ಕೂ ಉಪಯುಕ್ತವಾಗಿವೆ . ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡಿ ಅವರಂತೆ ಮಹಾನ ವ್ಯಕ್ತಿಗಳಾಗಿ ಎಂದು ಹಾರೈಸಿದರು . ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡಿ ಅವರಂತೆ ಮಹಾನ ವ್ಯಕ್ತಿಗಳಾಗಿ ಎಂದು ಹಾರೈಸಿದರು .

ಈ ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟ ಟಿಸಿದರು . ವೇದಿಕೆಯ ಮೇಲೆ ಪ್ರಾಚಾರ್ಯ ಐ.ಎಸ್.ಪವಾರ , ಉಪನ್ಯಾಸಕ ಎಸ್.ಕೆ ಓಂಕಾರ , ವಿದ್ಯಾರ್ಥಿ ಪ್ರತಿನಿಧಿ ಲಕ್ಷ್ಮೀ ಹಮ್ಮಣವರ ಇದ್ದರು . ವಿದ್ಯಾರ್ಥಿಗಳಾದ ಭಾಗ್ಯಶ್ರಿ ಕೊಪ್ಪದ ಸ್ವಾಗತಿಸಿದರು , ಗೀತಾ ಸೋಮನಟ್ಟಿ ನಿರೂಪಿಸಿದರು , ಅರಣುಸಿಂಗ ರಜಪೂತ ವಂದಿಸಿದರು


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ