Breaking News

ಪ್ರತಿನಿತ್ಯ ಕನ್ನಡವನ್ನು ಪ್ರೀತಿಸುವ ಕಾರ್ಯ ಆಗಬೇಕು : ಯುವ ನಾಯಕ ಸನತ್ ಜಾರಕಿಹೊಳಿ


ಗೋಕಾಕ: ಕನ್ನಡ ಎಂದರೆ ಬರಿ ಭಾಷೆ ಅಲ್ಲಾ , ಅದು ಪ್ರತಿಯೊಬ್ಬ ಕನ್ನಡಿಗರ ಉಸಿರಾಗಬೇಕು,ಬರೀ ರಾಜ್ಯೋತ್ಸವದಂದು ಕನ್ನಡವನ್ನು ಪ್ರೀತಿಸುವ ಪರಿಪಾಠ ಬಿಟ್ಟು ಪ್ರತಿನಿತ್ಯ ಕನ್ನಡವನ್ನು ಪ್ರೀತಿಸುವ ಕಾರ್ಯ ಆಗಬೇಕು.ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.

ಮಂಗಳವಾರದಂದು ನಗರದ ಕರವೇ ವತಿಯಿಂದ ಇಲ್ಲಿನ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡ ವಿಚಾರಣಾಧೀನ ಬಂಧಿಗಳೊಂದಿಗೆ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಕನ್ನಡ ಭಾಷೆ ಇಂದು ನಿನ್ನಯದಲ್ಲ 2 ಸಾವಿರ ವರ್ಷಗಳ ಹಿಂದಿನ ಭಾಷೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಬರೀ ರಾಜ್ಯೋತ್ಸವದಂದು ಕನ್ನಡವನ್ನು ಪ್ರೀತಿಸುವ ಪರಿಪಾಠ ಬಿಟ್ಟು ಪ್ರತಿನಿತ್ಯ ಕನ್ನಡವನ್ನು ಪ್ರೀತಿಸುವ ಕಾರ್ಯ ಆಗಬೇಕು. ಪ್ರತಿಯೊಬ್ಬ ಕನ್ನಡಿಗರು ಆ ದಿಸೆಯಲ್ಲಿ ಚಿಂತನೆ ಮಾಡಿ ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದ ಅವರು ತಿಳಿದೊ ತಿಳಿಯದೆ ಆಕಸ್ಮಿಕವಾಗಿ ಜರುಗಿದ ಘಟನೆಗಳಲ್ಲಿ ಸಿಲುಕಿ ಬಂಧಿಯಾಗಿರುವವರು ಭಾವುಕರಾಗದೆ ಸಮಾಜ ಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿಚಾರಗಳನ್ನು ಮಾಡಿ ಬಂಧಿಖಾನೆಯಿಂದ ಹೊರಗೆ ಬಂದಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಿರಿ ಎಂದು ಹಾರೈಸಿದರು.

 

ಕಾರ್ಯಕ್ರಮದ ಸಾನಿಧ್ಯವನ್ನುವನ್ನು ಶೂನ್ಯ ಸಂಪಾಧನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆರ್ಶಿವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ತಜ್ಞ ಡಾ.ಸಿ.ಕೆ ನಾವಲಗಿ ವಹಿಸಿದ್ದರು.

ವೇದಿಕೆಯಲ್ಲಿ ಉಪ ಕಾರಾಗೃಹದ ಅಧೀಕ್ಷಕಿ ಶ್ರೀಮತಿ ಲಕ್ಷ್ಮೀ ಹಿರೇಮಠ, ಬಿಇಒ ಜಿ.ಬಿ.ಬಳಗಾರ, ಪೌರಾಯುಕ್ತ ಶಿವಾನಂದ ಹಿರೇಮಠ, ವಲಯ ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಪತ್ರಕರ್ತ ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ರಶೀದ ಮಕಾನದಾರ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮುಖ್ಯ ವೀಕ್ಷಕ ಶಕೀಲ್ ಜಕಾತಿ ನಿರೂಪಿಸಿ, ವಂದಿಸಿದರು


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ