ಗೋಕಾಕ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲಕ್ಷ್ಮೀ
ಎಜುಕೇಶನ್ ಟ್ರಸ್ಟಿನ ಹಾಗೂ ಕ್ರೀಡೊ ( kreedo ) ಬೆಂಗಳೂರು ಇವರ ಸಹಭಾಗಿತ್ವದಲ್ಲಿ ದಿನಾಂಕ ಟ್ರಸ್ಟಿನ ಆವರಣದಲ್ಲಿ ಹೊಸ ಪಠ್ಯಕ್ರಮದೊಂದಿಗೆ ಪೂರ್ವ ಪ್ರಾಥಮಿಕ ಶಾಲೆಯ ಕೊಠಡಿಗಳ ಉದ್ಘಾಟನಾ ಸಮಾರಂಭ
ಜರುಗಿತು.
ಶನಿವಾರ ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟಿನಿಂದ ಕ್ರೀಡೋ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೀ-ಪ್ರಾಯಮರಿ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಅಧುನಿಕ ಕಲಿಕಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.ಕಲಿಕೆಯು ಕಂಠ ಪಾಠಕ್ಕೆ ಸೀಮಿತವಾಗದೇ ಅರ್ಥಪೂರ್ಣವಾಗಿರಬೇಕು. ಮಕ್ಕಳು ಕೇಳುವ ಕೂತೂಹಲಕಾರಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು. ಅವರಿಗೆ ಮನೆ ಮತ್ತು ಶಾಲೆಗಳಲ್ಲಿ ಉತ್ತಮವಾದ ವಾತಾವರಣ ಕಲ್ಪಿಸುವುದರಿಂದ ಅವರ ಸರ್ವಾಂಗೀಣ ಬೆಳವಣಿಗೆಯಾಗಿ ಪ್ರತಿಭಾನ್ವಿತರಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷರಾದ ಸುವರ್ಣ ಭೀಮಶಿ ಜಾರಕಿಹೊಳಿ ಉದ್ಘಾಟಿಸಿದರು.ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸನತ್ ಜಾರಕಿಹೊಳಿ, ಅಂಗ ಸಂಸ್ಥೆಗಳ ಮುಖ್ಯೋಪಾಧ್ಯಾಯರಾದ ಬಿ.ಕೆ.ಕುಲಕರ್ಣಿ, ಎಚ್.ವಿ.ಪಾಗ್ನೀಸ್, ಪಿ.ವಿ.ಚಚಡಿ, ಉಪನ್ಯಾಸ ಅರುಣ ಪೂಜೇರ, ಶಿಕ್ಷಕಿ ನೈನಾ ಪಾರೂಳಕರ ಇದ್ದರು.ಶಿಕ್ಷಕಿ ಪ್ರಿಯಾಂಕಾ ಹಂದಿಗುಂದ ಸ್ವಾಗತಿಸಿ, ವಂದಿಸಿದರು.