Breaking News

ಪತ್ರಿಕಾ ದಿನಾಚರಣೆ – ಪ್ರಶಸ್ತಿ ಸಾಧಕರಿಗೆ ಜವಾಬ್ದಾರಿಗಳು ಹೆಚ್ಚಿಸುತ್ತವೆ : ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ


ಬೆಳಗಾವಿ ದಿ 9:– ಯುವ ಕಾರ್ಯನಿರ್ವಹಿಸುವ ಪತ್ರಕರ್ತರ ಸಂಘ, ರಿ ಬೆಳಗಾವಿ, ಬೆಳಗಾವಿ ನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ,ಪತ್ರಿಕಾ ದಿನಾಚರಣೆಯ ನಿಮಿತ್ಯ ಸಮಾಜದ ವಿವಿಧ ಕ್ಷೇತ್ರ ದಲ್ಲಿನ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ, ಜಿಲ್ಲಾ ಮಟ್ಟದ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ರವಿವಾರ ಬೆಳಗಾವಿ ನಗರದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ಜರುಗಿದವು

ಜ್ಯೋತಿ ಬೆಳಗಿಸಿ ಈ ಕಾರ್ಯಕ್ರಮವನ್ನು ಗೋಕಾಕದ ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನಿರ್ದೇಶಕರಾದ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಯವರು ಉದ್ಘಾಟನೆಯನ್ನು ನೇರವೇರಿಸಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟಕರ ಕಾರ್ಯಕ್ಕೆ ಸಂತೋಷ ವ್ಯಕ್ತ ಪಡಿಸಿ ಅಭಿನಂದಿಸಿದರು ಪ್ರಶಸ್ತಿ ಸಾಧಕರಿಗೆ ಜವಾಬ್ದಾರಿಗಳು ಹೆಚ್ಚಿಸುತ್ತವೆ ಮತ್ತು ಪತ್ರಿಕೋದ್ಯಮವು ಇಂದು ಮಹತ್ವದ ಸ್ಥಾನ ಪಡೆದಿದೆ, ಪ್ರಭಾವಶಾಲಿ ಮಾಧ್ಯಮವಾಗಿ ಬೆಳೆದಿದೆ,ಪತ್ರಕರ್ತರು ಸಮಾಜದ ಮುಖ್ಯ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ಮಾಡಲೆಂದು ಆಶಿಸಿದರು

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿಗಳಾದ ಗೋಕಾಕದ ಪ್ರೊ ಚಂದ್ರಶೇಖರ ಅಕ್ಕಿಯವರು , ಡಾ ಸಿ ಕೆ ನಾವಲಗಿಯವರು.ಬೆಳಗಾವಿಯ ಡಾ. ಗುರುದೇವಿ ಹುಲ್ಲೆಪ್ಪನವರಮಠ ರವರು ಆಗಮಿಸಿ ಉಪನ್ಯಾಸ ನೀಡಿ ಪತ್ರಿಕೋದ್ಯಮ ಬೆಳೆದು ಬಂದ ಬಗೆಯನ್ನು ವಿವರಿಸಿದರು,ಪತ್ರಿಕೆಗಳು ಇಂದು ಸರ್ವ ಕ್ಷೇತ್ರಗಳ ಸುಧಾರಣೆಗೆ ಶ್ರಮಿಸುತ್ತಿವೆ, ಅವುಗಳ ಕಾರ್ಯ ಶ್ಲಾಘನೀಯ ವಾಗಿವೆ,ಓದುಗರು ಪತ್ರಿಕೆಗಳ ಬೆಳವಣಿಗೆಗೆ ಸಹಾಯ ಸಹಕಾರ ನೀಡಬೇಕೆಂದರು, ಗ್ರಾಮೀಣ ಭಾಗದ ಸಣ್ಣ ಸಣ್ಣ ಪತ್ರಿಕೆಗಳಿಗೆ ಸಮಾಜದ,ಸರಕಾರದ ಬೆಂಬಲ ಸಹಾಯ ಸಿಗಲೆಂದರು

ಗೋಕಾಕದ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿಹಾಗೂ ಚಲನಚಿತ್ರ ನಟಿ,ಧಾರವಾಡದ ಶ್ರೀಮತಿ ಜಯಶ್ರೀ ಜಾತಿಕರ್ತರವರು ಪೌರಾಣಿಕ ಏಕ ಪಾತ್ರಭಿನಯಗಳು ಸಭಿಕರ ಗಮನ ಸೆಳೆದವು

ಸಮಾಜ ಸೇವಕರು ಆದ ಅಡಿವೇಪ .ಕ೦ಕಾಳಿ, ವಕೀಲರಾದ ಎನ್ ಆರ್ ಲಾತೂರ,ಡಾ ವಿಜಯ ಜಂಬಗಿ, ಗಣ್ಯರಾದ ಸತ್ತೆಪ್ಪ ಕರವಾಡಿ, ಸಮಾಜ ಸೇವಕರಾದ ಎಬಿನೇಜರ್ ಕರಬನ್ನವರ, ರಮೇಶ ಮಾದರ, , ಬಸವರಾಜ ಕಾಡಾಪುರ ,ಯಲ್ಲಪ್ಪ .ಉಪ್ಪಾರಟ್ಟಿ . ರವರು ವೇದಿಕೆ ಮೇಲಿದ್ದರು

ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಸುಣಗಾರ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು, ನಾಡಿನ ಸಮಾಚಾರ ದಿನಪತ್ರಿಕೆಯ ಸಂಪಾದಕರಾದ ಬಸವರಾಜ ಉಪ್ಪಾರಟ್ಟಿ ಯವರು ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಶ್ರೀಮತಿ ಶ್ರುತಿ ನಿಗಡೆ ಯವರು ಕಾರ್ಯಕ್ರಮ ನಿರೂಪಣೆ ಮಾಡಿದರು

ಯುವ ಕಾರ್ಯ ನಿರ್ವಹಿಸುವ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು

ಮಧ್ಯಾಹ್ನ ಕವಿಗೋಷ್ಠಿಯು ಪ್ರೊ, ರಾಜನಂದಾ ಘಾರ್ಗಿ ಯವರ ಅಧ್ಯಕ್ಷತೆ ಯಲ್ಲಿ ಜರುಗಿತು,ಮುಖ್ಯ ಅತಿಥಿಗಳಾಗಿ ಸಾಹಿತಿ ಶ್ರೀಮತಿ ಜ್ಯೋತಿ ಬಾದಾಮಿ, ಕುಡಚಿಯ ಡಾ ಲಕ್ಷ್ಮಣ ಎನ್ ಚೌರಿ,ಜಿಲ್ಲಾ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸುರೇಶ ಸಕ್ರೆಣ್ಣವರ ಆಗಮಿಸಿ ಮಾತನಾಡಿ ಕವಿಗೋಷ್ಠಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು

ಜಿಲ್ಲೆಯ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಹಿರಿಯ ಕವಿಗಳು ಕವನ ವಾಚನ ಮಾಡಿದರು ಸಂಕೇಶ್ವರದ ಕವಿ ಕುಮಾರ ತಳವಾರ ನಿರೂಪಣೆ ಮಾಡಿದರು ಪತ್ರಕರ್ತರಾದ ರಮೇಶ ಮಗದುಮ್ಮ, ಜಾನ್ ವಾಯ್ ಉಪ್ಪಾರಟ್ಟಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು

ಸಮಾಜದಲ್ಲಿ ಗಮನಾರ್ಹ ಕಾರ್ಯ ಮಾಡಿರುವವರಿಗೆಪ್ರಶಸ್ತಿ ನೀಡಲಾಯಿತು

ರಾಜ್ಯ ಮಟ್ಟದ ಸಾಹಿತ್ಯ ರತ್ನಪ್ರಶಸ್ತಿಯನ್ನು ಸಾಹಿತಿ ಶ್ರೀಮತಿ ರಾಜೇಶ್ವರಿ ಹೆಗಡೆ, ಮೈಸೂರಿನ ಡಾ ಸುಧಾ ಎಚ್ ಎಸ್, ಚಿಕ್ಕೋಡಿಯ ಬಸವರಾಜ ಹೊನಗೌಡರ, , ಸವದತ್ತಿಯ ಈರಣ್ಣ ಅಂಬಲಿ, ಬೆಂಗಳೂರಿನ ವಿ .ಮಂಜುನಾಥ, ತುಮಕೂರಿನ ಡಾ ಪಿ ಶಂಕರಪ್ಪ, ಕಲಬುರಗಿಯ ಡಾ ಶಿವಕುಮಾರ ಸೂರ್ಯವಂಶ, ಸವಣೂರಿನ ಶ್ರೀಮತಿ ಜ್ಯೋತಿ ಚಿಕ್ಕೂoಶಿ, ಗದಗಿನ ಶ್ರೀಮತಿ ಭಾಗ್ಯಶ್ರೀ ಹಳ್ಳಿಕೇರಿಮಠ, ದಾವಣಗೆರೆಯ ಗಣೇಶ ಶೈಣೆ, ಧಾರವಾಡದ ಪ್ರಮೋದ ಜೋಶಿ, ಹುಕ್ಕೇರಿಯ ಶಿಕ್ಷಕಿ ಶ್ರೀಮತಿ ಲೀಲಾವತಿ ರಜಪೂತ, ಹಾಸನದ ಸುಂದರೇಶ್ ಡಿ ಉಡುವೇರೆ, ದಾವಣಗೆರೆಯ ಪಿ ಜಯರಾಮನ್, ಅಥಣಿಯ ಶ್ರೀಮತಿ ಭಾರತಿ ಸಂ ಕೋರೆ, ಚಿಕ್ಕಬಳ್ಳಾಪುರದ ಶ್ಯಾಮಸುಂದರ ಇವರಿಗೆ ನೀಡಿ ಸನ್ಮಾನ ಮಾಡಿ ಪ್ರಶಸ್ತಿಪ್ರಮಾಣ ಪತ್ರ, ಮೈಸೂರು ಪೇಟಾ ತೊಡಿಸಿ,ಗೌರವಿಸಲಾಯಿತು

ಶಿಕ್ಷಕರತ್ನ,ಶಿಕ್ಷಣರತ್ನ ಪ್ರಶಸ್ತಿಗಳನ್ನು ಕಲ್ಬುರ್ಗಿಯ ಶಶಿಕಲಾ ಮೂಲಭಾರತಿ, ಗೋಕಾಕದ ಶ್ರೀಮತಿ ಬಸವರಾಜೇಶ್ವರಿ ಹಿರೇಮಠ, ಕಿತ್ತೂರಿನ ಎಸ್ ವಾಯ್, ಕಾಶಪ್ಪನವರ, ಬಳೋಬಾಳದ ಬಸಪ್ಪ ಖಡವಣ್ಣಿ, ಗೋಕಾಕದ ಚೇತನ ಜೋಗನ್ನವರ, ಗೋಕಾಕದ ತವನಪ್ಪ ಜೋಲಾಪುರೆ, ಬಳೋಬಾಳದ ಶ್ರೀಮತಿ ಶಾಂತವ್ವ ಚ ತಳವಾರ, ಬೆಳಗಾವಿಯ ಶಿಕ್ಷಕಿ ವನಿತಾ ಹಾಲಪ್ಪನವರ, ದೇವರ ಶೀಗಿಹಳ್ಳಿಯ ನಿವೃತ್ತ ಶಿಕ್ಷಕ ಮಾರುತಿ ಗಂ ಭಜಂತ್ರಿ ಯವರಿಗೆ ನೀಡಿ ಪ್ರಶಸ್ತಿ ಫಲಕ ನೀಡಿ ಮೈಸೂರ ಪೇಟಾ ತೊಡಿಸಿ ಸನ್ಮಾನ ಮಾಡಲಾಯಿತು

ಸಮಾಜ ಸೇವಾ ರತ್ನಪ್ರಶಸ್ತಿ ಗೆ ಬೆಳಗಾವಿಯ ಸುಧಾಕರ ಜೆಟ ಪಾಲ್, ಗೋಕಾಕಿನ ರಮೇಶ ಪೂಜೇರಿ, ನಾಗನೂರಿನ ಎಬಿನೇಜರ ಕರಬನ್ನವರ, ನಿಂಗ್ಯಾನಟ್ಟಿಯ ಬಸವರಾಜ ಅಪ್ಪಣ್ಣ ತಳವಾರ, ಬಸಳಿಗುಂದಿಯ ಸಿದ್ದಪ್ಪ ವಾಲಿಕಾರ ಇವರಿಗೆ ಸನ್ಮಾನ ಮಾಡಿ ಪ್ರಶಸ್ತಿ ಫಲಕ ನೀಡಿ ಮೈಸೂರ ಪೇಟಾ ತೊಡಿಸಿಗೌರವಿಸಲಾಗುವುದು,

ಸಂಗೀತ ರತ್ನ, ಕಲಾರತ್ನ ಪ್ರಶಸ್ತಿಯನ್ನು ಧಾರವಾಡದ ಕೀರ್ತನಾ ಆರ್ ಪೂಜಾರಿ, ಗೋಕಾಕದ ಜಿ ಕೆ ಕಾಡೇಶ ಕುಮಾರ ರವರಿಗೆ ಪ್ರಶಸ್ತಿ ಫಲಕನೀಡಿ ,ಮೈಸೂರ ಪೇಟಾ ತೊಡಿಸಿ ಸನ್ಮಾನಿಸಿ ವಿತರಿಸಲಾಯಿತು

ವೈದ್ಯರತ್ನಪ್ಲಾರೆನ್ಸ ನೈಟಿoಗೇಲ್ ಪ್ರಶಸ್ತಿಯನ್ನು ಕಲಬುರಗಿಯ ಡಾ ಅಶ್ವಿನಿ ಹಿರೇಮಠ,ಗೋಕಾಕಿನ ಡಾ ಡಿ ಆರ್ ಮಲ್ಲಾಪುರ ನೀಡಿ ಸನ್ಮಾನಿಸಲಾಯಿತು ,ಪತ್ರಿಕೋದ್ಯಮರತ್ನ ರತ್ನರಾಜ್ಯ ಪ್ರಶಸ್ತಿಯನ್ನು ಕಡಬಿಯ ಬೆಳ್ಳೆಪ್ಪ ಮ ದಳವಾಯಿ ಹಾಗೂ ಕಲಘಟಗಿಯ ಪ್ರಭುಲಿಂಗಪ್ಪ ರಂಗಾಪುರ ಇವರಿಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು

ನಂತರ ವಿವಿಧ ಕಲಾವಿದರಿಂದ ಸಂಗೊಳ್ಳಿ ರಾಯಣ್ಣ ನಾಟಕದ ಮುಖ್ಯ ಭಾಗ ಪ್ರದರ್ಶನ ನಡೆಯಿತು,ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,

ನಾಡಿನ ಸಮಾಚಾರ ದಿನಪತ್ರಿಕೆಯ ಸಂಪಾದಕರಾದ ಬಸವರಾಜ ಉಪ್ಪಾರಟ್ಟಿಯವರು ಹಾಗೂ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಸುಣಗಾರರವರು ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿ ನಡೆಸಿಕೊಟ್ಟರು,


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!

ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ