ಗೋಕಾಕ : ಭೀಮಶಿ ಜಾರಕಿಹೊಳಿ ಪುತ್ರ ಸರ್ವೋತ್ತಮ ತಮ್ಮ ಹುಟ್ಟು ಹಬ್ಬವನ್ನು ಗುರುವಾರ ಇಲ್ಲಿನ ಶಿವಾ ಪೌಂಡೇಷನ್ ಸಂಸ್ಥೆಯಲ್ಲಿರುವ , ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸರಳ ರೀತಿಯಲ್ಲಿ ಆಚರಿಸಿಕೊಂಡರು.
ಸರ್ವೋತ್ತಮ ಜಾರಕಿಹೊಳಿ ಅವರನ್ನು ಮುದ್ದಾದ ಮಕ್ಕಳು ಗುಲಾಬಿ ಹೂ ಕೊಡುವ ಮೂಲಕ ಸ್ವಾಗತಿಸಿದರು. ಜನ್ಮ ದಿನದ ಶುಭ ಕೋರಿದರು. ಬಳಿಕ ಸರ್ವೋತ್ತಮ ಮಕ್ಕಳ ಮುಂದೆಯೇ ಕೇಕ್ ಕತ್ತರಿಸಿ, ಸಿಹಿ ಹಂಚಿಸಿದರು. ತದನಂತರ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪುಸ್ತಕ, ಪೇನ್ ನೀಡಿದರು.
ತಾಲ್ಲೂಕ ಪಂಚಾಯಿತಿ ಸದಸ್ಯ ಲಕ್ಷ್ಮಣ್ ಮಸಗುಪ್ಪಿ, ಅನೀಲ ತುರಾಯಿದಾರ್, ಸಂತೋಷ್ ಕಟ್ಟಿಕಾರ್, ಆನಂದ ಉಳಾಗಡ್ಡಿ, ಸುರೇಶ ಉಳಾಗಡ್ಡಿ, ರಾಜು ತಳವಾರ, ರಾಜು ಕಬ್ಬೂರ್ , ಕೇಶವ ಕುರಿ ಸೇರಿದಂತೆ ಇತರರು ಇದ್ದರು.
ಅನಾಥ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿದ ಸರ್ವೋತ್ತಮ ಜಾರಕಿಹೊಳಿ
CKNEWSKANNADA / BRASTACHARDARSHAN CK NEWS KANNADA