ಗೋಕಾಕ:ಕೊರೊನ ಸಂದರ್ಭದಲ್ಲಿ ವಕೀಲರಿಗಾಗಿ 5ಕೋಟಿ ರೂಪಾಯಿಗಳ ಆರ್ಥಿಕ ಸಹಾಯ ಘೋಷಿಸಿರುವ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ, ಸಹಕರಿಸಿದ ಕಾನೂನು &ಗೃಹ ಸಚಿವರಾದ ಬಸವರಾಜ ಬೊಮ್ಮಾಯಿಯವರಿಗೆ ರಾಜ್ಯದ ಸಮಸ್ತ ವಕೀಲರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು
ವಕೀಲರು ಮತ್ತು ಕಾನೂನು ಪ್ರಕೋಷ್ಟ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಸಂಚಾಲಕರಾದ ಶಶಿಧರ ದೇಮಶೆಟ್ಟಿ ಅವರು ತಿಳಿಸಿದ್ದಾರೆ.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನವಡಗಿಯವರ ನೇತೃತ್ವದ ನಿಯೋಗದೊಂದಿಗೆ, ರಾಜ್ಯ ವಕೀಲರ ಪರಿಷತ್ತಿನ ಪರವಾಗಿ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸಬಾಬುರವರು, ಸದಸ್ಯರಾದ ಜೆ.ಅನಿಲ್ ಕುಮಾರ್ ರವರು, ಆರ್.ರಾಜಣ್ಣನವರು, ಬೆಂಗಳೂರು ವಕೀಲರ ಸಂಘದ ಪರವಾಗಿ ಅಧ್ಯಕ್ಷರಾದ ಎ.ಪಿ.ರಂಗನಾಥ್ ರವರು, ಬಿಜೆಪಿ ಕಾನೂನು ಪ್ರಕೋಷ್ಠದ ಪರವಾಗಿ ಯೋಗೇಂದ್ರ ರವರು ಎಲ್ಲರೂ ಒಟ್ಟಾಗಿ ಮತ್ತು ಒಗ್ಗಟ್ಟಾಗಿ ಗೌರವಾನ್ವಿತ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ವಕೀಲರ ಸಂಕಷ್ಟಕ್ಕೆ ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದು ಅದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು 5 ಕೋಟಿಗಳ ಆರ್ಥಿಕ ಸಹಾಯ ಘೋಷಿಸಿದ್ದಾರೆ.
ಆರ್ಥಿಕ ಸಹಾಯ ಪಡೆಯುವಲ್ಲಿ ಸಹಕರಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನವಡಗಿಯವರಿಗೆ, ರಾಜ್ಯ ವಕೀಲರ ಪರಿಷತ್ತಿನ ಎಲ್ಲಾ ಸದಸ್ಯರುಗಳಿಗೆ, ಬೆಂಗಳೂರು ವಕೀಲರ ಸಂಘದ ಎಲ್ಲಾ ಪಧಾದಿಕಾರಿಗಳಿಗೆ, ಬಿಜೆಪಿ ಕಾನೂನು ಪ್ರಕೋಷ್ಠದ ಎಲ್ಲಾ ಪಧಾದಿಕಾರಿಗಳಿಗೆ ತಮ್ಮ ಒಗ್ಗಟ್ಟಿನ ಪ್ರಯತ್ನಕ್ಕಾಗಿ ರಾಜ್ಯದ ಎಲ್ಲಾ ವಕೀಲರ ಪರವಾಗಿ ಮತ್ತು ವೈಯಕ್ತಿಕವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.