ಘಟಪ್ರಭಾ: ಅರಬಾಂವಿ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಇವರ ಆದೇಶದ ಮೇರೆಗೆ ದುರದುಂಡಿ ಗ್ರಾಮದಲ್ಲಿ ಜಲ ಜೀವನ ಮಿಷನ ಯೋಜನೆಯಡಿಯಲ್ಲಿ 1.80ಲಕ್ಷ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಕಾಮಗಾರಿಗೆ ಯುವ ನಾಯಕರಾದ ಸರ್ವೋತ್ತಮ್ ಜಾರಕಿಹೊಳಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಿಕ, ಗ್ರಾ.ಪಂ ಅಧ್ಯಕ್ಷೆ ರೇಣುಕಾ ಹಾಲಪ್ಪ ಅಂತರಗಟ್ಟಿ, ಉಪಾಧ್ಯಕ್ಷ ಬಸಪ್ಪ ಒಬ್ಬಟ್ಟಿ, ಮುಖಂಡರಾದ ಅಣ್ಣಪ್ಪ ಚಂಪಗಾವಿ, ನೀಲಪ್ಪ ಮಾಳ್ಯಾಗೋಳ, ಭೀಮಶಿ ಹುಕ್ಕೇರಿ, ಭೀಮಪ್ಪ ಅಂತರಗಟ್ಟಿ, ಗ್ರಾ.ಪಂ ಸದಸ್ಯರಾದ ಅವ್ವಣ್ಣ ಗೌಡಿ, ಮಲ್ಲಪ್ಪ ವಗ್ಗನವರ, ಲಕ್ಷ್ಮಣ ಸಿಂಗೋಟಿ, ಬಸವರಾಜ ಕೋಳ್ಳಾನಟ್ಟಿ, ಲಕ್ಷ್ಮಣ ವ್ಯಾಪಾರಿ, ದುಂಡಪ್ಪಾ ಅಂತರಗಟ್ಟಿ, ಬಸವರಾಜ ಮಾಳ್ಯಾಗೋಳ, ಗುತ್ತಿಗೆದಾರಾದ ಭೀಮಶಿ ಅಂತರಗಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ದಫೆದಾರ, ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.