ಗೋಕಾಕ/ಮೂಡಲಗಿ : ತಾಲ್ಲೂಕಿನ ಅಡಿಬಟ್ಟಿ ಚಿಗಡೋಳ್ಳಿ ಮೇಳವಂಕಿ ಕಲಾರಕೊಪ್ಪ ಹಡಗಿನಾಳ ಉದಗಟ್ಟಿ ತಳಕಟನಾಳ ತಿಗಡಿ ಸುಣಧೋಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಇಂದು ತೆರಳಿ ಪ್ರವಾಹ ಹಾಗೂ ಮಳೆಯಿಂದಾದ ಹಾನಿಯನ್ನು ಪರಿಶೀಲಿಸಿದರು.
ಗ್ರಾಮದ ಹಿರಿಯರೊಂದಿಗೆ ಸಭೆ ನಡೆಸಿದ ಸರ್ವೋತ್ತಮ ಜಾರಕಿಹೊಳಿ ಮಳೆಯಿಂದ ಹಾನಿಯಾಗಿರುವ ಮನೆ ,ಹೊಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದರು.
ನಂತರ ಮಾತನಾಡಿದ ಅವರು ಗ್ರಾಮದಲ್ಲಿ ಆಗಿರುವ ಹಾನಿಯನ್ನು ವೀಕ್ಷಣೆ ಮಾಡಿದ್ದೇನೆ. ಕೆಲವು ಮಾಹಿತಿಯನ್ನು ಗ್ರಾಮದ ಹಿರಿಯರಿಂದ ಪಡೆದುಕೊಂಡಿದ್ದೇನೆ. ಎಲ್ಲವನ್ನೂ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತಾಡುತ್ತೇವೆ ಎಂದು ಹೇಳಿದರು.
ಸುಣಧೋಳಿ ಗ್ರಾಮದ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಮಳೆಯಿಂದಾಗಿ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿ, ಸ್ವಾಮೀಜಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಭೂತಪ್ಪ ಗೋಡೆರ. ರಂಗಪ್ಪ ಚಪರಿ. ಹಣಮಂತ ಕೊಪ್ಪದ. ಪಾಂಡು ದೊಡಮನಿ,ಮಹಾದೇವ ಗೋಡೆರ, ಪರಸಪ್ಪ ಕುರಿ,ಉದ್ದಪ್ಪ ಮಾದರ,ಅಡಿವೆಪ್ಪ ಅಡಿಬಟ್ಟಿ,ಮಾದೇವ ಪತ್ತಾರ,ಮಾರುತಿ ಚಿಗಡೊಳ್ಳಿ,ಅರ್ಜುನ ಕಲಾರಕೊಪ್ಪ, ಮುತ್ತೇನಗೌಡ್ರ ಹಡಗಿನಾಳ,ಲಕ್ಷ್ಮಣ ಬಾನಿ,ರಫೀಕ್ ತಿಗಡಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.