ಗೋಕಾಕ : ಸ್ತ್ರೀಯರನ್ನು ತಾಯಿ ಪಾರ್ವತಿ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ನದಿ ಇಂಗಳಗಾವ ಗುರುಲಿಂಗ ದೇವರಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ೧೪೩ನೇ ಮಾಸಿಕ ಶಿವಾನುಭವ ಗೊಷ್ಠಿಯಲ್ಲಿ ಮಾತನಾಡಿದರು.
ಸತಿಯನ್ನು ಬಿಟ್ಟು ಉಳಿದೆಲ್ಲ ಸ್ತ್ರೀಯರು ಮಹಾತಾಯಿ ಪಾರ್ವತಿ ಸಮಾನರು ಎಂಬ ಭಾವನೆಯಿಂದ ಬಾಳಿ ಬದುಕಿದರೆ ಸಮಾಜವನ್ನು ಸದೃಢಗೋಳಿಸಲು ಸಾಧ್ಯ . ಆ ನಿಟ್ಟಿನಲ್ಲಿ ನಾವೆಲ್ಲರೂ ಬದುಕಬೇಕು. ಗುರು ಮೌನದಿಂದ ಹೇಳಿದ ಮಾತನ್ನು ಶಿಷ್ಯನ್ನು ಜ್ಞಾನದಿಂದ ಅರಿಯಬೇಕು ಅಂದಾಗ ಮಾತ್ರ ಗುರು ಶಿಷ್ಯರ ಸಂಬಂಧ ಕ್ಕೆ ಮೌಲ್ಯ ಬರುತ್ತದೆ ಎಂದರು.
ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂಥನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು. ವೇದಿಕೆಯಲ್ಲಿ ಬಟಕುರ್ಕಿ ಮಠದ ಬಸವಲಿಂಗ ಮಹಾಸ್ವಾಮಿಗಳು, ಸಾಹಿತಿ ಡಾ.ಸಿ.ಕೆ ನಾವಲಗಿ, ಶಕುಂತಲಾ ಕಟ್ಟಿ, ವಿನೂತಾ ನಾವಲಗಿ, ಆರ್.ಎಂ.ಲುಡಬುಡೆ , ಬಸವರಾಜ ಖಾನಪನವರ ಇತರರು ಇದ್ದರು. ಶಿಕ್ಷಕ ಎಸ್.ಕೆ ಮಠದ ನಿರೂಪಿಸಿ, ವಂದಿಸಿದರು.