ಸಾವಳಗಿ ಪೀಠದ ಶೂನ್ಯ ಸಿಂಹಾಸನಾಧೀಶರು ಜಗದ್ಗುರು ಶ್ರೀ ಶ್ರೀಮನ್ ಮಹಾರಾಜ ನಿರಂಜನ ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾ ಸನ್ನಿಧಿಯವರ ಸಾನ್ನಿಧ್ಯದಲ್ಲಿ.ಶ್ರೀ ಪೀಠದ ಜಾತ್ರೆಯ ಹಾಗೂ ಜಾನುವಾರುಗಳ ಜಾತ್ರೆಯ ಕಾರ್ಯಕ್ರಮಗಳನ್ನು ಈ ವರ್ಷವೂ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಪೂಜ್ಯರು , ಶ್ರೀಪೀಠದ ಸದ್ಭಕ್ತರು , ಜನಪ್ರತಿನಿಧಿಗಳು ಹಾಗೂ ನಾಲ್ಕೂ ಊರಿನ ಸಾರ್ವಜನಿಕ ಸಮಾಲೋಚಿಸಿ ನಾಡಿನ ಸದ್ಭಭಕ್ತರ ಆರೋಗ್ಯ ದೃಷ್ಟಿಯಿಂದ ಜಾತ್ರಾ ಮಹೋತ್ಸವ ರದ್ದು ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ . ಸಂಪ್ರದಾಯ ಮುರಿಯದಂತೆ ಸರಳವಾಗಿ ಕೇವಲ ಶ್ರೀಪೀಠದ ಧಾರ್ಮಿಕ ವಿಧಿ ವಿಧಾನಗಳನ್ನು ಮಾತ್ರ ಆಚರಿಸಿ ಹಾಗೂ ಕೃರ್ತು ಗದ್ದುಗೆಯ ದರ್ಶನಕ್ಕೆ ಅವಕಾಶ ಇರುವ ದಿಲ್ಲ ಮತ್ತು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಒಂದು ವೇಳೆ ಸೊಂಕು ಉಲ್ಬಣಗೊಂಡಲ್ಲಿ ಶ್ರೀಪೀಠದ ಪ್ರವೇಶವನ್ನು ಸಹ ನಿರ್ಬಂಧಿಸಲಾಗಿದೆ. ಜಾಗತಿಕವಾಗಿ ಹರಡಿರುವ ಕೋವಿಡ್ / ಒ ಮಿಕ್ರಾನ್ ಸಾಂಕ್ರಾಮಿಕ ಕಾಯಿಲೆ ಕೊನೆಗೊಂಡು ಸಮಾಜದಲ್ಲಿ ಸ್ವಸ್ಥ ವಾತಾವರಣ ನಿರ್ಮಾಣ ವಾಗಿದೆ ಆದಕಾರಣ ಈ ವರ್ಷವು ಜಾತ್ರೆ ರದ್ದು ಮಾಡಲಾಗಿದೆ ಎಂದು ಶ್ರೀ ಪೀಠದ
ಶ್ರೀ ಜಗದ್ಗುರು ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು.ಮಾತನಾಡಿ ಆರೋಗ್ಯ , ಆಯುಷ್ಯ , ಆನಂದ ಸದಾ ಕರುಣಿಸಲೆಂದು ಪ್ರಾರ್ಥಿಸೋಣ .ಈ ಅಧಿಕೃತ ಪ್ರಕಟಣೆಗೆ ಸದ್ಭಕ್ತರೆಲ್ಲರೂ ಸಹಕರಿಸಬೇಕೆಂದು ಶ್ರೀ ಪೀಠ ಸನ್ನಿಧಿ ಅವರು ಆದೇಶ ನೀಡಿದರು.