ಗೋಕಾಕ ಅ 11 : ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಶುಕ್ರವಾರ ದಿ. 13 ರಂದು ಸರಳವಾಗಿ ನೇರವೆರಿಸಲಾಗುವುದು ಎಂದು ಶ್ರೀ ಸಿದ್ದೇಶ್ವರ ದೇವಸ್ಥಾನ (ಟ್ರಸ್ಟ್) ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಕೊರೋನಾ ಮಹಾಮಾರಿ ತಡೆಗಟ್ಟಲು ಸರಕಾರದ ನಿಯಮಗಳನ್ನು ಪಾಲಿಸುವ ಸಲುವಾಗಿ ಈ ಸಲ ರಥೋತ್ಸವವನ್ನು ರದ್ದು ಗೋಳಿಸಲಾಗಿದ್ದು, ರಥೋತ್ಸವ ದಿನದಂದು ರಥದ ಸ್ಥಳದಲ್ಲೇ ಸಾಯಂಕಾಲ 4 ಘಂಟೆಗೆ ಪೂಜೆ ಮಾಡಲಾಗುವುದು. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಬರಬೇಕು. 10 ವರ್ಷದ ಒಳಗಿನ ಮಕ್ಕಳಿಗೆ ದೇವಸ್ಥಾನದ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬಹುಮುಖ್ಯವಾಗಿ ಈ ಬಾರಿ ಜಾತ್ರೆಗೆ ದೇವಸ್ಥಾನದ ಅಕ್ಕ ಪಕ್ಕ ಆಟಿಗೆ ಸಾಮಾನು, ತಿಂಡಿ ತಿನಿಸುಗಳ ಅಂಗಡಿಗಳನ್ನು ಹಚ್ಚಲು ಅನುಮತಿ ಇರುವುದಿಲ್ಲ.
ಈ ಬಾರಿಯ ಸಿದ್ದೇಶ್ವರ ದೇವಸ್ಥಾನದ ಗರ್ಭ ಗುಡಿಗೆ ಯಾರಿಗೂ ಪ್ರವೇಶ ಇರುವುದಿಲ್ಲ ಮತ್ತು ಸಂಜೆ 6 ಘಂಟೆಗೆ ಮಂಗಳಾರತಿ ಮಾಡಿ ಜಾತ್ರೆಯನ್ನು ಮುಕ್ತಾಯ ಗೊಳಿಸಲಾಗುವುದು. ದೇವರ ದರ್ಶನ ಪಡೆಯುವ ವೇಳೆ ಜನದಟ್ಟನೆ ಆಗಬಾರದು ಎಂದು ಉದ್ದೇಶಿಸಿ ದೇವರ ದರ್ಶನವನ್ನು ಮುಂಜಾನೆ 8:30 ರಿಂದ ಪ್ರಾರಂಭಿಸಿ ಸಾಯಂಕಾಲ 5:00 ಘಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿದ್ದೇಶ್ವರ ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ.