Breaking News

ಸದಾ ನಗಿಸುವ ಸೃಜನ್ ಲೋಕೇಶ ಕಣ್ಣಿರಿಟ್ಟದ್ದು ಏಕೆ?


ನಟ ಸೃಜನ್​ ಲೋಕೇಶ್ ಅವರು ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಮಜಾ ಟಾಕೀಸ್​ ಶೋ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಸೃಜನ್​ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರು ಈಗ ರಂಗಭೂಮಿ ಬಗ್ಗೆ ಮಾತನಾಡಿದ್ದಾರೆ.

‘ರಾಜ-ರಾಣಿ’ ಹೆಸರಿನ ಹೊಸ ಶೋಅನ್ನು ಕಲರ್ಸ್​ ಕನ್ನಡ ವಾಹಿನಿ ಪರಿಚಯಿಸಿದೆ. ಕಳೆದ ವಾರ ಈ ಶೋ ಗ್ರ್ಯಾಂಡ್​ ಆರಂಭ ಕಂಡಿದೆ. ಸೆಲೆಬ್ರಿಟಿ ಜೋಡಿಗಳನ್ನು ಕರೆಸಿ ವೇದಿಕೆ ಮೇಲೆ ಮಾತನಾಡಿಸಲಾಗುತ್ತದೆ. ನಟ ಸೃಜನ್​ ಲೋಕೇಶ್​ ಹಾಗೂ ನಟಿ ತಾರಾ ಈ ಶೋ ನಿರೂಪಕರಾಗಿದ್ದಾರೆ. ಈ ಶೋನಲ್ಲಿ ಸೃಜನ್​ ಲೋಕೇಶ್​ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಸುಬ್ಬಯ್ಯ ನಾಯ್ಡು ಮೊಮ್ಮೊಗನಾಗಿ, ಗಿರಿಜಾ ಲೋಕೇಶ್​-ಲೋಕೇಶ್​ ಮಗನಾಗಿ, ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್​ಗಾಗಿ 14 ವರ್ಷ ಸೈಕಲ್​ ಹೊಡೆದಿದ್ದೇನೆ.

ಎಷ್ಟೋ ಪ್ರಯತ್ನಗಳನ್ನು ಮಾಡಿದ್ದೇನೆ. ಆ ತಾಳ್ಮೆಯನ್ನು ಕಲಿಸಿಕೊಡೋದೆ ರಂಗಭೂಮಿ. ಅದಕ್ಕಾಗಿಯೇ ಅದನ್ನು ರಂಗಭೂಮಿ ಎಂದು ಕರೆಯೋದು’ ಎಂದು ಸೃಜನ್​ ಕಣ್ಣೀರು ಹಾಕಿದ್ದಾರೆ.

ಜೀವನದ ಅಂತ್ಯ ಎನ್ನುವುದಿದ್ದರೆ ಅದು ರಂಗಭೂಮಿ ಮೇಲೆ ಆಗಲಿ ಅನ್ನೋದು ನನ್ನ ಆಸೆ ಎಂದು ಸೃಜನ್​ ಹೇಳಿದ್ದಾರೆ. ಈ ಪ್ರೋಮೋ ನೋಡಿದ ಬಹುತೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಭಾವುಕ ನುಡಿ ಬರೆದುಕೊಂಡಿದ್ದಾರೆ.

ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಕಾರ್ಯಕ್ರಮ ಮಜಾ ಟಾಕೀಸ್​ಗೆ ಬ್ರೇಕ್​ ಬೀಳಲಿದೆ ಎಂದು ಸೃಜನ್​ ಲೋಕೇಶ್​ ಇತ್ತೀಚೆಗೆ ಹೇಳಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಲೈವ್​ ಬಂದಿದ್ದ ಅವರು ಈ ವಿಚಾರ ಸ್ಪಷ್ಟಪಡಿಸಿದ್ದರು. ‘ಮಾಜಾ ಟಾಕೀಸ್​ಗೆ ಈಗ ಸ್ವಲ್ಪ ಬ್ರೇಕ್​ ಬೀಳಲಿದೆ. ಯಾಕೆಂದರೆ ಈ ವಾರ ಗ್ರ್ಯಾಂಡ್​ ಫಿನಾಲೆ ಮಾಡುತ್ತಿದ್ದೇವೆ. ಹೊಸ ರೂಪದಲ್ಲಿ ಬರುವ ಪ್ರಯತ್ನ ಮಾಡುತ್ತೇವೆ. ಈಗ ನಾವು ಒಂದು ಅಲ್ಪ ವಿರಾಮ ಪಡೆದುಕೊಂಡಿದ್ದೇವೆ. ಇಷ್ಟು ವರ್ಷಗಳ ಕಾಲ ಮಜಾ ಟಾಕೀಸ್​ ನಡೆದುಕೊಂಡು ಬರಲು ನಿಮ್ಮ ಬೆಂಬಲವೇ ಕಾರಣ. ಈಗ ಹೊಸ ಕೆಲಸ ಆರಂಭಿಸುತ್ತಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ’ಎಂದು ಸೃಜನ್​ ಹೇಳಿದ್ದರು. ಇದಾದ ಬೆನ್ನಲ್ಲೇ ಅವರು ‘ರಾಜಾ-ರಾಣಿ’ ಶೋನ ಜಡ್ಜ್​ ಆಗಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಬಿಯರ್ ಬಾಟಲ್ ಎಸೆದು ಕಿಡಿಗೇಡಿಗಳು ದಾಳಿ

ಬೆಂಗಳೂರು : ಸಂಸದೆ ಸುಮಲತಾ ವರ್ಸಲ್ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ವಾದ ಕೊಂಚ ತಣ್ಣಗಾದಂತ ಸಂದರ್ಭದಲ್ಲಿಯೇ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ