ಬೆಳಗಾವಿ: ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಪಾಶ್ಚಾಪೂರ ಪಂಚಾಯಿತಿಯಿಂದ ನಿನ್ನೇಯಷ್ಟೇ ಆಯ್ಕೆಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರೆ ಹಾಗೂ ಪಂಚಾಯಿತಿ ಸದಸ್ಯೆ ಮನಿಷಾ ಸಿಂಧೆ ಎಂಬುವವರು 10 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಾಶ್ಚಾಪೂರ ಪಂಚಾಯಿತಿ 5 ನೇ ವಾರ್ಡ್ ನಿಂದ ಮನಿಷಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಶಾಸಕ ಸತೀಶ ಜಾರಕಿಹೊಳಿ ಅವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಗಣಿ ದರ್ಗಾ, ಪರಶುರಾಮ ಉಪ್ಪಾರ, ನಾಗಪ್ಪ ಉಪ್ಪಾರ,ಕುಮಾರ ಗುಡಗನಟ್ಟಿ, ರಾಮಚಂದ್ರ ಆವೋಜಿ,ಬಾಬು ಹೀರೆಕೋಡಿ,ಕೆಂಪಣ್ಣಾ ಮುಗಳಿ, ಪಾಂಡು ಮನ್ನಿಕೇರಿ ಮುಂತಾದವರು ಇದ್ದರು.