ಹುಕ್ಕೇರಿ ತಾಲೂಕಿನ ಹಳೆ ವಂಡಮೂರಿ ಗ್ರಾಮದಲ್ಲಿ ಇಂದು ನಡೆದ ಕಾರ್ಯಕ್ರಮ ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣವನ್ನು ಓದಬೇಕು.ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಹುಲ್ ಜಾರಕಿಹೊಳಿ ಹೇಳಿದರು.
ಅವರು ಹಳೆ ವಂಟಮೂರಿ ಗ್ರಾಮದಲ್ಲಿ ಇಂದು ನೂತನ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೊನಾ ಹಿನ್ನಲೆ ವಾಲ್ಮೀಕಿ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸದೆ ಇರುವುದು ಬೇಸರದ ಸಂಗತಿ. ಆದರೂ ನಾವುಗಳು ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸುವ ಮೂಲಕ ಮಹನೀಯರಿಗೆ ಗೌರವವನ್ನು ತೋರೋಣ ಎಂದರು.
ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ನನ್ನ ಆಹ್ವಾನಿಸಿದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೇ ರೀತಿ ನಿಮ್ಮ ಪ್ರೀತಿ, ಸಹಕಾರ ನಮ್ಮ ಮೇಲಿರಲಿ ಎನ್ನುತ್ತ ಮತ್ತೋಮ್ಮೆ ವಾಲ್ಮೀಕಿ ಜಯಂತಿ ಶುಭಾಶಯ ಕೋರಿದರು.
ಜಿಪಂ ಸದಸ್ಯೆ ಪಕ್ಕೀರವ್ವಾ ಯಲ್ಲಪ್ಪಾ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯರಾದ ಮಂಜುಗೌಡ ಪಾಟೀಲ, ಸಿದ್ಧಗೌಡ ಸುಣಗಾರ, ಚಿಕ್ಕೋಡಿ ಎಸ್ಟಿ ಘಟಕದ ಅಧ್ಯಕ್ಷ ರಾಮಣ್ಣಾ ಗುಳ್ಳಿ, ತಾಪಂ ಸದಸ್ಯ ಪರಶುರಾಮ ಕಲ್ಲೋಣಿ, ಕಾಂಗ್ರೆಸ್ ಮುಖಂಡ ಕಿರಣ ರಜಪೂತ್, ಅನ್ನಪೂರ್ಣ ನಿರ್ವಾನಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ವಿಜಯ ತಳವಾರ, ಜಿಲ್ಲಾಧ್ಯಕ್ಷ ಸಚಿನ ದಡ್ಡಿ, ಫಜಲ್ ಮಕಾಂದಾರ, ಯಲ್ಲಪ್ಪಾ ಬಸರಗಿ, ಬಸವರಾಜ ಡುಮ್ಮನಾಯಿಕ, ಪ್ರಕಾಶ ಬರಗಾಲಿ, ದೇವಪ್ಪಾ ಹೊನ್ನೂರಿ ಸೇರಿದಂತೆ ಇತರರು ಇದ್ದರು.