ಬೆಳಗಾವಿ : ಲೈನ್ ಮ್ಯಾನ್‌ಗಳು ತಮ್ಮ ಜೀವನವನ್ನೆ ಹೊತ್ತೆಯಾಗಿ ಇಟ್ಟು ಹಗಲು-ರಾತ್ರಿ ಎನ್ನದೆ ಜನಸಾಮಾನ್ಯರಿಗೆ ಬೆಳಕು ನೀಡುವ ದೃಷ್ಟಿಯಿಂದ ಕೆಲಸ ಮಾಡುತ್ತಾರೆ,ಎಂದು ಶಾಸಕ ರಾಜು ಸೇಠ್ ಹೇಳಿದರು.
ಬೆಳಗಾವಿಯ ನೆಹರು ನಗರದ ಗಣಪತಿ ದೇವಾಲಯದ ಆವರಣದಲ್ಲಿ ಲೈನ್ ಮ್ಯಾನ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಇದೇ ವೇಳೆ ಕೆಲ ಲೈನ್ ಮ್ಯಾನ್ ಗಳನ್ನು ಸನ್ಮಾನಿಸಲಾಯಿತು .
ಬಳಿಕ ಮಾತನಾಡಿದ ಶಾಸಕ ರಾಜು ಸೇಠ್ ಅವರು ಲೈನ್ ಮ್ಯಾನ್ ಗಳು ತಮ್ಮ ಜೀವನವನ್ನೆ ಹೊತ್ತೆಯಾಗಿ ಇಟ್ಟು ಹಗಲು-ರಾತ್ರಿ ಎನ್ನದೆ ಜನಸಾಮಾನ್ಯರಿಗೆ ಬೆಳಕು ನೀಡುವ ದೃಷ್ಟಿಯಿಂದ ಕೆಲಸ ಮಾಡುತ್ತಾರೆ ಪ್ರತಿನಿತ್ಯ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ ಅವರ ಕಾರ್ಯ ಶ್ಲಾಘನೀಯ ಎಂದರು
ಕಾರ್ಯನಿರ್ವಾಹಕ ಇಂಜಿನಿಯರ್ ಅಶ್ವಿನ್ ಶಿಂಧೆ ಮಾತನಾಡಿ ಲೈನ್ ಮ್ಯಾನ್ ದಿವಸ್ ಆಚರಣೆ ದಿವಸಕ್ಕೆ ಶಾಸಕ ರಾಜು ಸೇಠ್ ಯವರು ಬಂದಿರುವುದು ಸಂತಸ ತಂದಿದೆ, ಬೆಳಗಾವಿಗೆ 24 ಘಂಟಿ ವಿದ್ಯುತ್ ಕೂಡುವ ಕೆಲಸ ಮಾಡುತ್ತೀವೆ, ಇಂಧನ ಸಚಿವರು ಬಂದು ಹೋದ ತಕ್ಷಣ 57ಕ್ಕೂ ಅಧಿಕ ಮಾಡಿದ್ದೇವೆ ಗೃಹಜೋತಿ ಯೋಜನೆಯಲ್ಲಿ 200 ಯೂನಿಟ್ ಬರುವುದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು
ಈ ಕಾರ್ಯಕ್ರಮದಲ್ಲಿ ಶಾಸಕ ರಾಜು ಸೇರ್, ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಕಾರ್ಯನಿರ್ವಾಹಕ ಇಂಜಿನಿಯರ್ ಅಶ್ವಿನ್ ಶಿಂಧೆ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಹಮ್ಮನವರ್, ಸದಾನಂದ ಕುರೇರ್ ನೇಮ್ ಪಟೇಲ್, ಸೇರಿ ನೂರಾರು ಲೈನ್ ಮ್ಯಾನ್ ಗಳು ಉಪಸ್ಥಿತಿದರು