ಗೋಕಾಕ: ಕೋವಿಡ್‌ನ ಎರಡನೇ ಅಲೆಯಿಂದ ಜನತಾ ಕರ್ಫ್ಯೂ ವಿಧಿಸಲಾಗಿದೆ. ಕೋವಿಡ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮತ್ತು ಕೋವಿಡ್ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಪೋಲಿಸ್ ಸಿಬ್ಬಂದಿಗಳಿಗೆ ಆರೋಗ್ಯ ಸಿಬ್ಬಂದಿಗಳಿಗೆ ನೀರಿನ ಬಾಟಲಿ, ಉಪಹಾರ ವ್ಯವಸ್ಥೆಯನ್ನು ರಾಮಸೇನೆ ಕರ್ನಾಟಕ, ಗೋಕಾಕ ಘಟಕದಿಂದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
ನಗರದಲ್ಲಿ ರಾಮಸೇನಾ ಕರ್ನಾಟಕ, ಗೋಕಾಕ ಮುಖ್ಯಸ್ಥರು ಮಾತನಾಡಿ ಕೋವಿಡ ಸಮಯದಲ್ಲಿ ಹಗಲಿರುಳು ನಮಗಾಗಿ ದುಡಿಯುತ್ತಿರುವ ಕೊರೋನಾ ವಾರಿಯರ್ಸಗಳು ತಮ್ಮ ಕುಟುಂಬವನ್ನು ಲೆಕ್ಕಿಸದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ, ಅದಕ್ಕಾಗಿ ನಮ್ಮದೊಂದು ಅಳಿಲು ಸೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಸಾದ ಅತ್ತಾವರ ನೇತೃತ್ವದಲ್ಲಿ ಸಂತೋಷ ಚಂದನವಾಳೆ, ಸಂತೋಷ ಸಾಳುಂಕೆ, ಶಾನೂರ ಕಲಾಲ, ಸಚಿನ್ ಕಾಂಬಳೆಕರ ಹಾಗೂ ವಿನಯ ಬಾಳಿಪಡಿ ರಾಮ್ ಸೇನಾ ಕರ್ನಾಟಕ ಕಾರ್ಯಕರ್ತರು ತಮ್ಮ ತಂಡವನ್ನು ಮಾಡಿಕೊಂಡು ಕೋವಿಡ ಮಾರ್ಗಸೂಚಿ ಪಾಲಿಸುವುದರ ಮೂಲಕ ತಮ್ಮ ಸೇವೆ ಸಲ್ಲಿಸಿದ್ದರು.