ಹೊಸದಿಲ್ಲಿ,ಆ .09 : ದೇಶದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ರವರು ಇಂದು ಆ .9 ರಂದು ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದ್ದು ರಕ್ಷಣಾ ಮಂತ್ರಾಲಯದ ಬಗ್ಗೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ .
ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ 101 ವಸ್ತುಗಳನ್ನು ಭಾರತದಲ್ಲೇ ಉತ್ಪಾದಿಸಲಿದ್ದೇವೆ . ವಿದೇಶದಿಂದ ಆಮದಾಗುವ ರಕ್ಷಣಾ ಸಾಮಾಗ್ರಿಗಳಿಗಳನ್ನು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಕ್ಷಣಾ ವಲಯದ ಸುಮಾರು 101 ರಕ್ಷಣಾ ವಲಯದ ಉತ್ಪನ್ನಗಳನ್ನು ಪಟ್ಟಿ ಮಾಡಿದ್ದು . ಆಧುನಿಕ ತಂತ್ರಜ್ಞಾನದ ಆರ್ಟಿಲರಿ ಗನ್ಸ್, ರೈಫಲ್ಸ್, ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ ಗಳು, ರಾಡಾರ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದರು .
2020ರಿಂದ 2024ರ ನಡುವೆ ದೇಶದಲ್ಲಿ ಹೆಚ್ಚಿನ ಉತ್ಪಾದನೆ ಮಾಡಲು ಒತ್ತು ನೀಡಲಾಗುವುದು. ಭೂ ಸೇನೆ ಮತ್ತು ವಾಯುಸೇನೆಗೆ 1,30,000 ಕೋಟಿ. ರೂ ಮತ್ತು ನೌಕಾ ಸೇನೆಗೆ 1,40,000 ಕೋಟಿ ರೂ ಮೀಸಲಿಡುವುದಾಗಿ ಸಚಿವರು ಘೋಷಿಸಿದರು.