ಗೋಕಾಕ : ನಗರದ ರೋಟರಿ ರಕ್ತ ಭಂಡಾರದಲ್ಲಿ ರೋಟರಿ ಸಂಸ್ಥೆ ,ರೋಟರಿ ಸೇವಾ ಸಂಘ,ಇನ್ನರವೀಲ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಅಮೃತ ಮಹೋತ್ಸವ ಆಚರಿಸಲಾಯಿತು.75 ವಸಂತಗಳನ್ನು ಪೂರೈಸಿದ ಹಿರಿಯ ಜೀವಿಗಳನ್ನು ಗೌರವಿಸುವ “ ಅಮೃತ ಮಹೋತ್ಸವ” ಸಮಾರಂಭವನ್ನು ಆಚರಿಸಿ, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸತ್ಕಾರ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಗಣೇಶ ವರದಾಯಿ, ಸುರೇಶ ಕುಲಕರ್ಣಿ,ಮಲ್ಲಕಾರ್ಜುನ ಕಲ್ಲೋಳಿ, ಜ್ಯೋತಿ ವರದಾಯಿ, ದಿಲೀಪ ಮೆಳವಂಕಿ, ಸೋಮಶೇಖರ ಮಗದುಮ್ಮ, ವಿದ್ಯಾ ಗುಲ್ಲ, ಸತೀಶ್ ನಾಡಗೌಡ, ಬಸವರಾಜ ಹುಳ್ಳೂರ, ಜಯಾನಂದ ಮುನ್ನೋಳಿ, ಡಾ: ಅಶೋಕ್ ಮುರಗೋಡ, ರಾಜು ವಿ , ವಿದ್ಯಾ ಸೋಮಶೇಖರ ಮಗದುಮ್ಮ, ದುಂಡಪ್ಪಾ ಬಿದರಿ ಹಾಗೂ ಅನೇಕರು ಉಪಸ್ಥಿತರಿದ್ದರು.