ಬೆಂಗಳೂರು : ಸಂಸದೆ ಸುಮಲತಾ ವರ್ಸಲ್ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ವಾದ ಕೊಂಚ ತಣ್ಣಗಾದಂತ ಸಂದರ್ಭದಲ್ಲಿಯೇ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಕಳೆದ ರಾತ್ರಿ ಬಿಯರ್ ಬಾಟಲ್ ಎಸೆದು ದಾಳಿ ನಡೆಸಿರೋದಾಗಿ ತಿಳಿದು ಬಂದಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ಬಗ್ಗೆ ಮಾತನಾಡಿದ್ದರ ಕುರಿತಂತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಸದೆ ಸುಮಲತಾಗೆ ಬೆಂಬಲಿಸಿ ಮಾತನಾಡಿದ್ದರು. ಈ ಬಳಿಕ ರಾಕ್ ಲೈನ್ ವೆಂಕಟೇಶ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು, ಮುಖಂಡರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು.ಇದೇ ಕಾರಣದಿಂದಾಗಿ ಸಂಸದೆ ಸುಮಲತಾ ಸೇರಿದಂತೆ ಹಲವರ ನಿವಾಸಗಳಿಗೂ ಸರ್ಕಾರ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿತ್ತು.
ಇದರ ಮಧ್ಯೆ ಮಧ್ಯರಾತ್ರಿಯಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಕಿಡಿಗೇಡಿಗಳು ಬಿಯರ್ ಬಾಟಲ್ ಎಸೆದು ದಾಳಿ ನಡೆಸಿರೋದಾಗಿ ತಿಳಿದು ಬಂದಿದೆ. ರಾಕ್ ಲೈನ್ ನಿವಾಸದಲ್ಲಿರುವಂತ ಸಿಸಿಟಿವಿಯಲ್ಲಿ, ಅಪರಿಚಿತ ಕಿಡಿಗೇಡಿಗಳು ಬಿಯರ್ ಬಾಟಲ್ ಎಸೆದಿರೋದು ದೃಶ್ಯಗಳು ಸೆರೆಯಾಗಿವೆ. ಈ ಮೂಲಕ ಸಂಸದೆ ಸುಮಲತಾ ವರ್ಸಸ್ ಕುಮಾರಸ್ವಾಮಿ ಟಾಕ್ ವಾರ್ ಮತ್ತಷ್ಟು ತಾರಕಕ್ಕೇರಿದಂತೆ ಕಂಡುಬಂದಿದೆ
CKNEWSKANNADA / BRASTACHARDARSHAN CK NEWS KANNADA