ಗೋಕಾಕ: ಕರೋನಾ ಎರಡನೇ ಅಲ್ಲೇ ಶುರುವಾಗಿದ್ದು ಇಂತಹ ಸಂದಿಗ್ಧ ಸಮಯದಲ್ಲಿ ತಮ್ಮ ಕುಟುಂಬ ಬಿಟ್ಟು ತಮ್ಮ ಜೀವದ ಹಂಗು ತೋರೆದು ಸೇವೆ ಸಲ್ಲಿಸುತ್ತಿರುವ ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಅಮರನಾಥ ಜಾರಕಿಹೊಳಿ ಅಭಿಮಾನಿ ಬಳಗದಿಂದ ಮಧ್ಯಾಹ್ನದ ಸುಮಾರು 150 ಕ್ಕೂ ಹೆಚ್ಚು ಪೋಲಿಸರಿಗೆ ಊಟದ ವ್ಯವಸ್ಥೆ, ತಂಪು ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.
ಸುಡು ಬಿಸಿಲಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೋಲಿಸ್ ಸಿಬ್ಬಂದಿಗಳಿಗೆ ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಊಟದ ವ್ಯವಸ್ಥೆ ಮಾಡಿದ್ದರು, ಅದೇ ರೀತಿಯಾಗಿ ಈ ಬಾರಿಯು ಕೂಡ ಅಮರನಾಥ ಜಾರಕಿಹೊಳಿ ಅಭಿಮಾನಿ ಬಳಗದಿಂದ ತಂಡವನ್ನು ಮಾಡಿಕೊಂಡು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ವಿಶಾಲ ಪಟಗುಂದಿ, ರಾಕೇಶ ಪರಮಾರ,ಭೀಮಶಿ ಭರಮಣ್ಣವರ, ಕೆಂಪಣ್ಣಾ ರಾಜಾಪುರ, ಮಂಜುನಾಥ್ ಪಾವಟೆ, ಪುನೀತ ಮಳ್ಳಿಗೇರಿ,ದುಂಡಪ್ಪಾ ನಂದಿ, ವಿರೇಶ ಕಿವಟಿ, ವಿಶಾಲ ಸಾರಂಗಮಠ ಸಚೀನ ಕಮಟೇಕರ ಹಾಗೂ ಅನೇಕರು ಉಪಸ್ಥಿತರಿದ್ದರು.