ಗೋಕಾಕ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದೊಂದು ವಾರದಿಂದ ರಮೇಶ್ ಜಾರಕಿಹೊಳಿ ಅನಾರೋಗ್ಯ ಆಗಿದ್ದರು. ಕೊರೊನಾ ಸೋಂಕು ತಗುಲಿರುವುದಾಗಿ ಇಂದು ಗೋಕಾಕ ತಾಲ್ಲೂಕು ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ್ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ರಾತ್ರಿ ಅವರು ಬೇರೆ ರಾಜ್ಯದ ಟ್ರಾವಲ್ ಹಿಸ್ಟರಿ ಇಂದ ರಮೇಶ್ ಜಾರಕಿಹೊಳಿ ಬಂದಿದ್ರು, ನಿನ್ನೆ ರಾತ್ರಿ ಅವರನ್ನ ಕೋವಿಡ್ ಚಕ್ ಅಪ್ ಗೆ ಒಳಪಡಿಸಲಾಯ್ತು, ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರನ್ನ ಐಸಿಯೂನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದೆವೆ, ಅವರು ಇನ್ನೂ ಮೂರು ನಾಲ್ಕು ದಿನ ಅವರು ಐಸಿಯೂ ನಲ್ಲಿ ಇರಬೇಕಾಗುತ್ತೆ, ಅವರು ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಹೋಗಿ ಬಂದ ಹಿಸ್ಟರಿ ಇದೆ, ಕೋವಿಡ್ ವಾರ್ಡ್ ನಲ್ಲಿರುವ ಐಸಿಯೂ ನಲ್ಲಿ ರಮೇಶ್ ಜಾರಕಿಹೊಳಿಗೆ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ, ಏಪ್ರಿಲ್ 1ರಂದು ಗೋಕಾಕ ಆಸ್ಪತ್ರೆಗೆ ಬಂದು ಕೊವಿಡ್ ಟೆಸ್ಟ್ ಮಾಡಿಸಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ್ ಹೇಳಿದರು.
CKNEWSKANNADA / BRASTACHARDARSHAN CK NEWS KANNADA