ಗೋಕಾಕ : ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿ ಅವರ CD ಕೇಸ್ಗೆ ಸಂಬಂಧಿಸಿದಂತೆ ನೀಡಿದ್ದ ದೂರನ್ನು ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದಿದ್ದಾರೆ.
ಇಂದು ಈ ಪ್ರಕರಣಕ್ಕೆ ಹೊಸ ಟ್ವೀಸ್ಟ ಸಿಕ್ಕಿದ್ದು ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ದೂರಿನ ಕೇಸ್ ವಕೀಲರ ಮೂಲಕ ವಾಪಸ್ ಪಡೆಯಲು ಮುಂದಾಗಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರಿನ ವಿಚಾರದಲ್ಲಿ ದಿನೇಶ್ ಕಲ್ಲಹಳ್ಳಿ ಬಹುದೊಡ್ಡ ಯೂ-ಟರ್ನ್ ಹೊಡೆದಿದ್ದು, ನೀಡಿದ್ದ ದೂರು ವಾಪಸ್ ಪಡೆದಿದ್ದಾರೆ.
ಇನ್ನು ಮಾರ್ಚ್ 2 ರಂದು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ, ಇಂದು ದೂರನ್ನು ಹಿಂಪಡೆಯುತ್ತಿರುವುದಾಗಿ ಪತ್ರ ಬರೆದಿದ್ದಾರೆ.
ತಮ್ಮ ವಕೀಲರ ಮುಖಾಂತರ ಪೊಲೀಸ್ ಠಾಣೆಗೆ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ರವಾನೆ ಮಾಡಿದ್ದಾರೆ. ಜೊತೆಗೆ, ತನ್ನ ಲೆಟರ್ ಹೆಡ್‌ನಲ್ಲಿಯೇ ದೂರು ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿರುವ ದಿನೇಶ್ ಕಲ್ಲಹಳ್ಳಿ, ಅದೇ ಲೆಟರ್ ಅನ್ನು ವಕೀಲರ ಕೈಯಲ್ಲಿ ನೀಡಿರೋದಾಗಿ ತಿಳಿಸಿದ್ದಾರೆ.
ಇಂದೇ ದಿನೇಶ್ ಕಲ್ಲಹಳ್ಳಿ ಬರೆದಿರುವ ಪತ್ರವನ್ನು ಪೊಲೀಸ್ ಠಾಣೆಗೆ ವಕೀಲರು ನೀಡುತ್ತಿದ್ದಾರೆ. ದೂರು ವಾಪಸ್ ಪಡೆಯುವ ಮೂಲಕ ದಿನೇಶ್ ಕಲ್ಲಹಳ್ಳಿ ಅಚ್ಚರಿಯ ಹೆಜ್ಜೆಯನ್ನಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಭೀಮಶಿ ಭರಮಣ್ಣನವರ ಮಾತನಾಡಿ ಗೋಕಾಕ ಮತ ಕ್ಷೇತ್ರದ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದೆ. ಸತ್ಯ ಮೇವ ಜಯತೆ ಎಂದ ಗೋಕಾಕ ಜನತೆ, ಅಭಿಮಾನಿಗಳು ಇಂದು ಗ್ರಾಮ ದೇವಿಗೆ ಇಂದು ಮುಂಜಾನೆ ಉರುಳು ಸೇವೆ ಮಾಡಿದ್ದರು, ಅದರಂತೆ ದೇವಿ ಅರ್ಶೀವಾದ ಸಾಹುಕಾರ್ ಮೇಲಿದೆ ಎಂದು ಜನತೆಯ ಅಭಿಪ್ರಾಯವಾಗಿದೆ.