ಕಳೆದ ಏಳು ದಶಕಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿ ಸಮಾಜ ಸೇವೆ ಮಾಡುತ್ತಿದ್ದ *ಶ್ರೀ ಬಾಬುರಾವ್ ದೇಸಾಯಿ* ಅವರ ಸಾವು ಅತೀವ ದುಃಖವನ್ನುಂಟುಮಾಡಿದೆ ಎಂದು ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ಕಂಬನಿ ಮಿಡಿದಿದ್ದಾರೆ.
ಸಂಘದ ವಿವಿಧ ಸ್ತರದ ಜವಾಬ್ದಾರಿಗಳೊಂದಿಗೆ
ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಅಯೋಧ್ಯೆಯ ರಾಮ ಜನ್ಮಭೂಮಿ ಆಂದೋಲನದ ಪ್ರಮುಖ ಸಂಚಾಲಕರಾಗಿ ಕೆಲಸ ಮಾಡಿದ್ದ ದೇಸಾಯಿ ಅವರು ಮಾದರಿ ಸ್ವಯಂಸೇವಕರಾಗಿದ್ದರು ಎಂದು ಸಚಿವ ಜಾರಕಿಹೊಳಿ, ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಅತಿ ಹಿರಿಯ ಸ್ವಯಂಸೇವಕರಾಗಿದ್ದ ದೇಸಾಯಿ ಅವರ ಅಗಲಿಕೆಯಿಂದ ಒಬ್ಬ ಪ್ರಮುಖ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಮತ್ತು ಸಂಘದ ಸ್ವಯಂಸೇವಕರಿಗೆ ಅವರ ಅಗಲಿಕೆಯ ಶೋಕವನ್ನು ಭರಿಸುವ ಶಕ್ತಿ ನೀಡಲೆಂದು, ಸಚಿವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.