ಗೋಕಾಕ: ಇಲ್ಲಿನ ತಾಲೂಕು ಆಸ್ಪತ್ರೆ ಆವರಣದಲ್ಲಿ ಶನಿವಾರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕೋವಿಡ್ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಿದರು.
ಕೋವಿಡ್ ಸೋಂಕಿನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಜನ ಸಾಮಾನ್ಯರು ತುಂಬ ಸಂಕಷ್ಟಕ್ಕೀಡಾಗಿದ್ದರು. ಕೋವಿಡ್ ಕಾಲದಲ್ಲಿ ವೈದ್ಯರು, ಆಶಾ ಕಾರ್ಯಕರ್ತರ ಕೊಡುಗೆ ಅಪಾರವಾಗಿದೆ. ನಿರಂತರ ಶ್ರಮವಹಿಸಿ ವಿಜ್ಞಾನಿಗಳು ಕೋವಿಶಿಲ್ಡ್ ಲಸಿಕೆ ತಯಾರಿಸಿದ್ದು, ದೇಶ್ಯಾದ್ಯಂತ ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಯಶಸ್ವುಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಡಿಎಚ್ ಓ ಎಸ್.ಎಸ್.ಗಡೇದ, ಗೋಕಾಕ ತಾಲೂಕಾ ನೂಡಲ್ ಅಧಿಕಾರಿ ಡಾ.ಎಂ.ಎಸ್. ಪಲ್ಲೇದ್, ಪ್ರಕಶ ಹೊಳೆಪ್ಪಗೋಳ, ಗೋಕಾಕ ತಾಲೂಕು ವೈದ್ಯಾಧಿಕಾರಿಗಳಾದ ರವೀಂದ್ರ ಅಂಟೀನ್, ಡಾ.ಎಂ.ಎಸ್. ಕೊಪ್ಪದ ಮುಂತಾದವರು ಇದ್ದರು.
CKNEWSKANNADA / BRASTACHARDARSHAN CK NEWS KANNADA