Breaking News

ಬಲಿಪಾಡ್ಯಮಿ ಶುಭಾಶಯ ಕೋರಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌


ಇಂದು *ಬಲಿಪಾಡ್ಯಮಿ.* ಚಕ್ರವರ್ತಿ ಬಲೀಂದ್ರರು ಭೂಲೋಕಕ್ಕೆ ಬರುವ ದಿನ ಎಂದು ಪ್ರತೀತಿ ಇರುವ ಈ ದಿನ ನಮ್ಮ-ನಿಮ್ಮೆಲ್ಲರ ಮನೆಗಳಲ್ಲಿ ಸಂಭ್ರಮವನ್ನು ತರಲಿ. ಅಂಧಕಾರವನ್ನು ಕಳೆಯುವ *ಕಾರ್ತಿಕ ಮಾಸ* ಪ್ರಾರಂಭವಾಗುವುದೇ ಪಾಡ್ಯದ ಈ ದಿನದಂದು ಬೆಳಗುವ ದೀಪದ ಬೆಳಕಿನಿಂದ. ಇದು ಎಲ್ಲರ ಬಾಳನ್ನು ಬೆಳಗಿಸಲಿ. ಸಂಕಷ್ಟಗಳು ಹಾಗೂ ಸಾಂಕ್ರಾಮಿಕದ ಕತ್ತಲು ಕಳೆದು ಸಂತಸ ಸಂಭ್ರಮಗಳ ಬೆಳಗು ಮೂಡಲಿ ಎಂದು ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಶುಭ ಕೋರಿದ್ದಾರೆ.

ನಮ್ಮನ್ನು ಕಾಯುತ್ತಿರುವ ಭಾರತೀಯ ಯೋಧರ ಹಾಗೂ ಅವರ ಕುಟುಂಬದವರ ಕರ್ತವ್ಯನಿಷ್ಠೆ, ತ್ಯಾಗಗಳಿಗೆ ನಮ್ಮ ಕೃತಜ್ಞತೆಗಳ ಪ್ರತೀಕವಾಗಿ ಒಂದು ದೀಪ ಹಚ್ಚೋಣ ಎಂದು *ಜಲಸಂಪನ್ಮೂಲ ಸಚಿವರು* ಇದೇ ಸಂದರ್ಭದಲ್ಲಿ ಕರೆ‌ ನೀಡಿದ್ದಾರೆ.

ಹಾಗೆಯೇ ಕನ್ನಡ ನಾಡಿನ ಸಮಸ್ತ ಜನತೆಗೆ *ಬಲಿ ಪ್ರತಿಪದಾ ದೀಪಾವಳಿ ಹಬ್ಬ* ದ ಹಾರ್ದಿಕ ಶುಭಾಶಯಗಳನ್ನು ಸಚಿವ *ರಮೇಶ್ ಜಾರಕಿಹೊಳಿ‌* ಕೋರಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಸರ್ಕಾರಿ ಕಛೇರಿಗಳಲ್ಲಿ ಫೋಟೋ ಹಾಗೂ ವಿಡಿಯೋಗ್ರಫಿ ನಿಷೇಧ; ಭ್ರಷ್ಟಾಚಾರ, ಲಂಚಬಾಕ ಅಧಿಕಾರಿಗಳಿಗೆ ಅನುಕೂಲವಾಯಿತಾ?

ಸರ್ಕಾರಿ ಕಛೇರಿಗಳಲ್ಲಿ ಫೋಟೋ ಹಾಗೂ ವಿಡಿಯೋಗ್ರಫಿಯನ್ನು ನಿಷೇಧಿಸಿ ಆಡಳಿತ ಸುಧಾರಣಾ ಇಲಾಖೆ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಈ ರೀತಿ ಮೊಬೈಲ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ