ಹಿರಿಯ ಪತ್ರಕರ್ತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ
*ಶ್ಯಾಮ್ ಸುಂದರ್* ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆ ಹೊಂದಿದ್ದ ಶ್ಯಾಮ್ ಸುಂದರ್ ಅವರು *ದಿ ಹಿಂದು ಪತ್ರಿಕೆ* ಯ ವರದಿಗಾರರಾಗಿ ಕೆಲಸ ಮಾಡಿದ್ದರು. ಇವರ ವರದಿಗಾರಿಕೆ ಮೆಚ್ಚಿ ರಾಜ್ಯ ಸರ್ಕಾರವು ಮಾಧ್ಯಮ ವಿಭಾಗದಲ್ಲಿ ಪ್ರತಿಷ್ಠಿತ *ರಾಜ್ಯೋತ್ಸವ ಪ್ರಶಸ್ತಿ* ಯನ್ನು ನೀಡಿ ಗೌರವಿಸಿತ್ತು. ಇಂಥಹಾ ವಿರಳ ಪತ್ರಕರ್ತರನ್ನು ಕಳೆದುಕೊಂಡಿದ್ದೇವೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಮತ್ತು ಅವರ ಮಾಧ್ಯಮದ ಸಹವರ್ತಿಗಳಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಸಚಿವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.