ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ದಿನಾಂಕ ನಿಗದಿ ಆಗದಿದ್ದರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷೆಗಳ ದಂಡೆ ಇದೆ. ವಿಶೇಷ ಏನೆಂದರೆ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದಂತ ಪ್ರತಿಷ್ಠೆ ಹೊಂದಿರುವ ಕುಟುಂಬದವೆಂದರೆ ಅದು ಜಾರಕಿಹೊಳಿ ಕುಟುಂಬ.ಜಾರಕಿಹೊಳಿ ಕುಟುಂಬದವರ ತಾವು ಹಿಡಿದ ಹಠವನ್ನು ಸಾಧಿಸದೆ ಬಿಡದ ಕುಟುಂಬ ಎಂದು ಹೆಸರುವಾಸಿಯಾಗಿದೆ.
ಕರ್ನಾಟಕದಲ್ಲಿ ರಾಜಕಾರಣದಲ್ಲಿ ಹಠವಾದಿ ಎಂದೇ ಖಾತ್ಯಿಯಾಗಿರುವ ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ. ಬೆಳಗಾವಿ ಜಿಲ್ಲೆಯಲ್ಲದೆ ಕರ್ನಾಟಕ ಹಲವಾರು ಜಿಲ್ಲೆಗಳ ಮೇಲೆ ಹಿಡಿತ ಹೊಂದಿರುವ ನೇರ ನುಡಿಯ ರಾಜಕಾರಣಿ ಹಾಗೂ ನೇರೆ ರಾಜ್ಯಗಳ ಜೊತೆ ಉತ್ತಮ ಒಡನಾಟ ಹೊಂದಿರುವ ರಾಜಕಾರಣಿಯಾಗಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಸುಪುತ್ರ ಅಮರನಾಥ ಜಾರಕಿಹೊಳಿ. ಅವರು ಸಹ ತಂದೆಯಂತೆ ಉತ್ತಮ ಯುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೋಕಾಕ ಮತಕ್ಷೇತ್ರದ ಅಲ್ಲದೆ ಜಿಲ್ಲೆಯ ಪ್ರತಿಯೊಂದು ಕ್ಷೇತ್ರದ ಜನತೆಯ ಜೊತೆಗೆ ಉತ್ತಮ ಒಡನಾಟ ಹೊಂದಿದ್ದು. ಯುವಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಕೆಎಂಎಫ್ ನಿರ್ದೇಶಕರಾಗಿ ರಾಜಕೀಯಕ್ಕೆ ಕಾಲ್ಲಿಟ್ಟ ಅಮರನಾಥ ಜಾರಕಿಹೊಳಿ ಅವರು ಚುನಾವಣೆಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರದ ತುಂಬಾ ಚಿರಪರಿಚಿತರಾಗಿದ್ದಾರೆ. ಅರಭಾಂವಿ ಮತಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್ ಅಧ್ಯಕ್ಷರಾದ ನಂತರ ತಮ್ಮ ಚಿಕ್ಕಪ್ಪ ಅವರ ಜೊತೆ ತಾವು ನಿರ್ದೇಶಕರಾಗಿ ಹೆಚ್ಚಿನ ಒಡನಾಟ ಅಮರನಾಥ ಜಾರಕಿಹೊಳಿ ಅವರು ಹೊಂದಿರುವುದು.
ಅಮರನಾಥ ಜಾರಕಿಹೊಳಿ ಅವರು ತಮ್ಮದೇ ಆದ ಅಭಿಮಾನಿಗಳ ಪಡೆಯನ್ನೇ ಹೊಂದಿರುವ ಯುವ ನಾಯಕರಾಗಿ ಹೊರ ಹೊಮ್ಮಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲು ಮುಖ್ಯ ಕಾರಣ ರಮೇಶ್ ಜಾರಕಿಹೊಳಿ. ಮಹಾರಾಷ್ಟ್ರದಲ್ಲೂ ಬಿಜೆಪಿ ಸರಕಾರವನ್ನ ಪ್ರತಿಷ್ಠಾಪಿಸಿ ದೇವೆಂದ್ರ ಫಡ್ನವಿಸ್ ಅವರನ್ನ ಮತ್ತೊಮ್ಮೆ ಸಿಎಂ ಮಾಡಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ .
ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಪ್ರಧಾನಿ ಮೋದಿ ಪ್ರಭಾವ, ಜಾರಕಿಹೊಳಿ ಕುಟುಂಬದ ಪ್ರತಿಷ್ಠೇ, ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಸ್ವತಃ ತಂದೆಯವರೇ ಜಿಲ್ಲಾ ಉಸ್ತುವಾರಿ ಇದ್ದಾರೆ. ರಮೇಶ ಜಾರಕಿಹೊಳಿ ಅವರ ಪ್ರಭಾವ ಹೊಂದಿರುವ ಕಾರಣ ಅಮರನಾಥ ಜಾರಕಿಹೊಳಿ ಕಣಕ್ಕಿಳಿದರೇ ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಬಹುದು ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಹೀಗಾಗಿ ಪಕ್ಷ ಅಮರನಾಥ ಜಾರಕಿಹೊಳಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು ಎದ್ದು ಕಾಣುತ್ತಿದೆ . ಅಮರನಾಥ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಬೇಕೆಂದು ಅಭಿಮಾನಿಗಳು ಹಾಗೂ ಕ್ಷೇತ್ರದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಅಮರನಾಥ ಜಾರಕಿಹೊಳಿಗೆ ಟಿಕೆಟ್ ನೀಡಿದ್ದೆ ಆದರೆ ಜಾರಕಿಹೊಳಿ ಕುಟುಂಬದ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಲಿದೆ.ಆದರೇ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರ ಒಲವು ಯಾರ ಮೇಲೆ ಇದೇ ಎಂದು ಕಾದು ನೋಡಬೇಕಿದೆ.
–ಚೇತನ ಲ ಖಡಕಭಾಂವಿ ,ಸಂಪಾದಕರು
CK NEWS KANNADA