ನನ್ನ ಆತ್ಮೀಯ ಸ್ನೇಹಿತರಾಗಿದ್ದ ಕೇಂದ್ರ ಸಚಿವ *ಸುರೇಶ್ ಅಂಗಡಿ* ಅವರ ಹಠಾತ್ ನಿಧನ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ.
ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ನಾವಿಬ್ಬರೂ ಪರಸ್ಪರ ಚರ್ಚೆ ಮಾಡಿ ಕೆಲಸ ಮಾಡುತ್ತಿದ್ದೆವು.
ನಾನು ಭಾರತೀಯ ಜನತಾ ಪಾರ್ಟಿಯನ್ನು ಸೇರಲು ಅಂಗಡಿಯವರೂ ಪ್ರಮುಖ ಕಾರಣಕರ್ತರು.
ಕೋವಿಡ್ ಸೋಂಕು ವಿಪರೀತವಾಗಿ ಹರಡಿದ್ದ ಸಂದರ್ಭದಲ್ಲಿಯೂ ನಾನು ಮತ್ತು ಅಂಗಡಿ ಹಲವು ಬಾರಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದೆವು.
ಅಗಲಿದ ಸ್ನೇಹಿತ ಸುರೇಶ್ ಅಂಗಡಿ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರಿಗೆ ಮತ್ತು ಅವರ ಅಪಾರ ಬೆಂಬಲಿಗರಿಗೆ, ಭಾಜಪ ಕಾರ್ಯಕರ್ತರಿಗೆ ಶೋಕ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
*ಓಂ ಶಾಂತಿಃ*
– *ರಮೇಶ್ ಜಾರಕಿಹೊಳಿ*
ಜಲಸಂಪನ್ಮೂಲ ಸಚಿವರು