ಇಂದು ಬೆಳಗ್ಗೆ ನಿಧನರಾದ ಸವದತ್ತಿಯ ಹಿರಿಯ ಸಮಾಜ ಸೇವಕ ಆನಂದ್ ಚೋಪ್ರಾ ಅವರ ಮೃತದೇಹಕ್ಕೆ ಪುಷ್ಪಗುಚ್ಛವಿರಿಸಿ ವಂದಿಸಿದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ*
*ಶೋಕ ವ್ಯಕ್ತಪಡಿಸಿದ ಸಚಿವ ಜಾರಕಿಹೊಳಿ*
ಸವದತ್ತಿ ತಾಲ್ಲೂಕಿನ ಹಿರಿಯ ಸಮಾಜ ಸೇವಕರಾಗಿದ್ದ ನನ್ನ ಸ್ನೇಹಿತ *ಆನಂದ ಚೋಪ್ರಾ* ಅವರ ಅಕಾಲಿಕ ಮರಣವು ನನ್ನ ಮನಸ್ಸಿಗೆ ದುಃಖ ತಂದಿದೆ. ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ *ಆನಂದ ಚೋಪ್ರಾ* ಅವರು ಜನಪರ ಕಾಳಜಿ ಹೊಂದಿದ್ದರು. ಬಡವರ ಮತ್ತು ದೀನದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಇವರ ನಿಧನದಿಂದ ನಾನು ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಸಚಿವ *ರಮೇಶ್ ಜಾರಕಿಹೊಳಿ* ಹೇಳಿದರು. ಆನಂದ್ ಚೋಪ್ರಾ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ಶೋಕ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಸಚಿವ *ರಮೇಶ್ ಜಾರಕಿಹೊಳಿ* ಹೇಳಿದರು.